ಮಡಿಕೇರಿ, ಫೆ. 4: ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಉದ್ದೇಶದಿಂದ ಅವರು ಜಾರಿಗೆ ತಂದಿರುವ ಹಲವಾರು ಉತ್ತಮ ಯೋಜನೆಗಳನ್ನು ಹಾಗೂ ಒಳ್ಳೆಯ ಕೆಲಸಗಳನ್ನು ಸಾರ್ವಜನಿಕರಿಗೆ ವಿಡಿಯೋ ಪ್ರದರ್ಶನದ ಮುಖಾಂತರ ಹಾಗೂ ಕರಪತ್ರಗಳ ಮೂಲಕ ತಲಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ರಥಯಾತ್ರೆ ಕೈಗೊಂಡಿದೆ.
ತಾ. 5 (ಇಂದಿನಿಂದ) ತಾ. 6ರ ತನಕ ಕೊಡಗು ಜಿಲ್ಲೆಯಲ್ಲಿ ರಥವು ಚಲಿಸಲಿದೆ. ತಾ.5 ರಂದು (ಇಂದು) ಬೆಳಿಗ್ಗೆ 9.30ಕ್ಕೆ ಪೊನ್ನಂಪೇಟೆ, 10.30ಕ್ಕೆ ಗೋಣಿಕೊಪ್ಪ, 11.45ಕ್ಕೆ ವೀರಾಜಪೇಟೆ, ಮಧ್ಯಾಹ್ನ 2ಕ್ಕೆ ಮೂರ್ನಾಡು, 4.30 ಮಡಿಕೇರಿಯಲ್ಲಿ ವಾಸ್ತವ್ಯ.
ತಾ.6 ರಂದು ಬೆಳಿಗ್ಗೆ 9 ಗಂಟೆಗೆ ಸುಂಟಿಕೊಪ್ಪ, 10.30ಕ್ಕೆ ಕುಶಾಲನಗರ, 12ಕ್ಕೆ ಸೋಮವಾರಪೇಟೆ, 1.30ಕ್ಕೆ ಶನಿವಾರಸಂತೆ, 3 ಗಂಟೆಗೆ ಕೊಡ್ಲಿಪೇಟೆಗಾಗಿ ಸಂಚರಿಸಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.