ಮಡಿಕೇರಿ, ಫೆ. 4: ಭಾರತ ಸರ್ಕಾರದ ಜನೌಷಧ ಪರಿಯೋಜನೆಯ ಅಂಗವಾಗಿ ಜಿಲ್ಲೆಯಲ್ಲಿ ನಡೆದ ಜನೌಷದ ಜಾಗೃತಿ ಮತ್ತು ಮಹತ್ವ ಕಾರ್ಯಕ್ರಮದ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಜನೌಷದ್‍ನಿಂದಾಗುವ ಪ್ರಯೋಜನದ ಬಗ್ಗೆ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮವನ್ನು ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದಿಂದ ಆಯೋಜಿಸಲಾಗಿತ್ತು. ಮಡಿಕೇರಿಯ ಎಫ್‍ಎಂಸಿ ಕಾಲೇಜು, ಕಾನೂರು ವ್ಯಾಪ್ತಿಯ ಬೊಮ್ಮಾಡು ಅಂಗನವಾಡಿ ಕೇಂದ್ರದಲ್ಲಿ ಬುಡಕಟ್ಟು ಜನಾಂಗದವರಿಗೆ ಜನೌಷದ್ ಲಾಭದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವೀರಾಜಪೇಟೆಯ ಸಂತ ಅಂತೋಣಿ ಶಾಲೆ, ತ್ರಿವೇಣಿ ಶಾಲೆ, ಮಡಿಕೇರಿಯಲ್ಲಿ ಮಹಿಳಾ ಸಂಘಟನೆ ಹಾಗೂ ನಾಗರಿಕ ವೇದಿಕೆಯವರಿಗೆ ಜನೌಷದ್‍ನಿಂದಾಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಲಾಯಿತು. 2 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ನಡೆಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು, ಹಿರಿಯರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲ ಜನೌಷದ್ ಪರಿಯೋಜನೆಯ ರಾಜ್ಯ ಅಧಿಕಾರಿ ಅನಿಲ ದೀಪಕ್ ಶೆಟ್ಟಿ, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾಧ್ಯಕ್ಷ ಡಾ. ನವೀನ್‍ಕುಮಾರ್, ಸಹ ಸಂಚಾಲಕ ಡಾ. ದ್ಯಾನ್ ಕುಶಾಲಪ್ಪ, ಡಾ. ಉದಯ್‍ಕುಮಾರ್, ಸಮಿತಿಯ ಶಿವರಾಜ್, ಅವಿನಾಶ್ ಸಹಕಾರ ನೀಡಿದರು.