ವೀರಾಜಪೇಟೆ, ಫೆ. 4: ವೀರಾಜಪೇಟೆ ಟೌನ್ ಬ್ಯಾಂಕ್‍ನಲ್ಲಿ 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಲೆಕ್ಕಾಧಿಕಾರಿ ಸಿ.ಜೆ. ಅನ್ನಮ್ಮ ಮೇರಿ ಅವರನ್ನು ಬ್ಯಾಂಕ್‍ನ ಆಡಳಿತ ಮಂಡಳಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಕರ್ನಂಡ ಸೋಮಯ್ಯ ಮಾತನಾಡಿ, ಪ್ರಾಮಾಣಿಕತೆ, ದಕ್ಷತೆಗೆ ಬ್ಯಾಂಕ್‍ನ ಆಡಳಿತ ಮಂಡಳಿಯೊಂದಿಗೆ ಸಮಾಜ ಗೌರವಿಸಲಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷ ಕೆ.ಎಂ. ಚರ್ಮಣ್ಣ, ಮಾಜಿ ಅಧ್ಯಕ್ಷ ಕೋಲತಂಡ ಬೋಪಯ್ಯ, ಎಂ.ಪಿ. ಕಾಶಿ ಕಾವೇರಪ್ಪ, ಎಂ.ಎಂ. ನಂಜಪ್ಪ, ಎಂ.ಎನ್. ಪೂಣಚ್ಚ, ಕೆ.ಬಿ. ಪ್ರತಾಪ್, ಪಿ.ಕೆ. ಅಬ್ದುಲ್ ರೆಹಮಾನ್, ಡಿ.ಎಂ. ರಾಜ್‍ಕುಮಾರ್. ಎಂ.ಕೆ. ದೇವಯ್ಯ, ಜುಬಿನ ಪ್ರಸಾದ್, ಐ.ಎಂ. ಕಾವೇರಮ್ಮ, ಹೆಚ್.ಸಿ. ಮುತ್ತಮ್ಮ, ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ಹಾಗೂ ಸಿಬ್ಬಂದಿ ಹಾಜರಿದ್ದರು.