ಗುಡ್ಡೆಹೊಸೂರು, ಫೆ. 4: ಗುಡ್ಡೆಹೊಸೂರಿನಿಂದ ಮುಂದೆ ಸಿದ್ದಾಪುರ ರಸ್ತೆಯ ತಿರುವಿನಲ್ಲಿ ಅಂಗನವಾಡಿ ಮುಂದೆ ಅಪಾಯಕಾರಿ ಗುಂಡಿಯೊಂದು ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿಯ ಪೈಪ್ಲೈನ್ ರಸ್ತೆಗೆ ಅಡ್ಡವಾಗಿ ಹಾದುಹೊಗಿದೆ. ಈ ಪೈಪ್ಲೈನ್ ಒಡೆದುಹೊಗಿ ಗುಂಡಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ಅನಾಹುತ ನಡೆಯುವ ಮೊದಲು ಈ ಗುಂಡಿ ಮುಚ್ಚುವ ಕಾರ್ಯ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.