ಒಡೆಯನಪುರ, ಫೆ. 4: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಸುಳುಗಳಲೆ ಕಾಲೋನಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಶಾ ಸ್ಪೂರ್ತಿ ಕಾರ್ಯಕ್ರಮದಡಿ ಬ್ಯಾಗ್, ಶಾಂಪೂ, ಟೂತ್‍ಪೇಸ್ಟ್, ನೀರಿನ ಬಾಟಲಿ, ಬಿಸ್ಕತ್ ಮುಂತಾದ ಕಿಟ್‍ಗಳನ್ನು ವಿತರಿಸಲಾಯಿತು.

ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿ, ಸಂಸ್ಥೆ ವತಿಯಿಂದ ಇಲ್ಲಿಯವರೆಗೆ ಆರೋಗ್ಯ, ಆರ್ಥಿಕ ನೆರವು, ಸ್ವಚ್ಛತೆ, ಸಾಧಕರುಗಳಿಗೆ, ಸನ್ಮಾನ, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಗತ್ಯ ಆಹಾರ ಕಿಟ್, ಪೀಠೋಪಕರಣ ಮುಂತಾದ ಪರಿಕರಗಳನ್ನು ವಿತರಿಸಿರುವದರ ಜೊತೆಯಲ್ಲಿ ಸಂಸ್ಥೆಯಿಂದ ಈ ಭಾಗದಲ್ಲಿ ಸಾಮಾಜಿಕ ಜಾಗೃತಿ ಕಾರ್ಯವನ್ನು ಮಾಡುತ್ತಿದೆ ಎಂದರು.

ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ರೋಟರಿ ಸಂಸ್ಥೆ ಆಡಳಿತ ಮಂಡಳಿಯವರು ಈ ಭಾಗದಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಆಹಾರ ಪದಾರ್ಥ, ಪರಿಕರ, ಆಟಿಕೆ ವಸ್ತು ವಿತರಿಸುವ ಮೂಲಕ ಜನರಿಗೆ ಉಪಯುಕ್ತವಾದ ಸಮಾಜ ಸೇವೆ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವದು ಶ್ಲಾಘನಿಯ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ಸ್ಥಾಪಕ ಅಧ್ಯಕ್ಷ ಹೆಚ್.ವಿ. ದಿವಾಕರ್, ನಿಯೋಜಿತ ಅಧ್ಯಕ್ಷ ಸುಬ್ಬು, ನಿಯೋಜಿತ ಕಾರ್ಯದರ್ಶಿ ಹೆಚ್.ಪಿ. ಚಂದನ್, ಮಾಜಿ ಕಾರ್ಯದರ್ಶಿ ಹೆಚ್.ಎಸ್. ಸ್ವಾಗತ್, ಹೆಚ್.ಎಸ್. ಯಶ್ವಂತ್, ಆದಿತ್ಯ ಮುಂತಾದವರು ಇದ್ದರು.