ಮಡಿಕೇರಿ, ಫೆ.4 : ಇತ್ತೀಚಿಗೆ ನಿಧನರಾದ ಸಾಹಿತ್ಯ ಪ್ರೇಮಿ, ಪೆರಾಜೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯ ಕೇಶವ ಪೆರಾಜೆ ಅವರಿಗೆ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಸಂತಾಪ ಸೂಚಿಸಲಾಯಿತು.
ನಗರದ ಸರಕಾರಿ ನೌಕರರ ಸಭಾಂಗಣದಲ್ಲಿ ಜಿಲ್ಲೆಯ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಕೇಶವ ಪೆರಾಜೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮೊಗೇರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಪಿ.ಎಂ.ರವಿ, ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಕೇಶವ ಪೆರಾಜೆ ಅವರು ಸರಳ ಸಜ್ಜನಿಕೆಯ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದರು.
ಜಿಲ್ಲಾಧ್ಯಕ್ಷ ಬಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಚಂದ್ರ, ತಾಲೂಕು ಅಧ್ಯಕ್ಷ ಪಿ.ಬಿ. ಸುರೇಶ್, ಸಂಚಾಲಕ ಜನಾರ್ಧನ ಸೇರಿದಂತೆ ಪ್ರಮುಖರಾದ ಪಿ.ಯು. ಸುಂದರ, ಸಿದ್ದಾಪುರ ರಘು, ಅಪ್ಪಂಗಳ ಜನಾರ್ಧನÀ, ಮರಗೋಡು ವಿಶ್ವನಾಥ, ಹೆಬ್ಬೆಟ್ಟಗೇರಿ ರಮೇಶ್ ಹಾಗೂ ಹೋಬಳಿ ಮತ್ತು ಗ್ರಾಮ ಸಮಿತಿಯ ಪ್ರಮುಖರು ಸಂತಾಪ ಸಭೆಯಲ್ಲಿ ಹಾಜರಿದ್ದರು.