*ಸಿದ್ದಾಪುರ, ಫೆ. 4: ಗಾಂಧಿ ಪುರಸ್ಕಾರ ಪ್ರಶಸ್ತಿಯಿಂದ ಕೆಲವೇ ಅಂಕಗಳಿಂದ ವಂಚಿತವಾಗಿದ್ದ ಸಿದ್ದಾಪುರ ಗ್ರಾಮ ಪಂಚಾಯಿತಿ ಗಣರಾಜ್ಯೋತ್ಸವ ದಿನದಂದು ಸ್ವಚ್ಛ ಸುಂದರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಗ್ರಾಮದಲ್ಲಿರುವ ಶೌಚಾಲಯಗಳು ಸ್ವಚ್ಛ ಹಾಗೂ ಸುಂದರವಾಗಿ ಕಂಗೊಳಿಸುತ್ತಿರುವದರಿಂದ ಮತ್ತು ಗ್ರಾಮದಲ್ಲಿರುವ ಪ್ರತಿ ಶೌಚಾಲಯಗಳು ಮತ್ತು ಪರಿಸರ ಸ್ವಚ್ಛವಾಗಿರಬೇಕೆಂಬ ಹಿನ್ನೆಲೆ ಈ ಪ್ರಶಸ್ತಿ ಲಭಿಸಿದೆ.
ಅಧ್ಯಕ್ಷ ಎಂಕೆ. ಮಣಿ ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ವಿಶ್ವನಾಥ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಹಾಗೂ ಇತರರು ಇದ್ದರು.