ಚೆಟ್ಟಳ್ಳಿ, ಫೆ. 4: ಕೂರ್ಗ್ ಸ್ಟಾರ್ ಚೆಕ್ಕೆರ ಅಪ್ಪಯ್ಯ ನೂರಾಂಡ್‍ರ ನಮ್ಮೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆಕ್ಕೆರ ಕುಟುಂಬ ಹಾಗೂ ಕೊಡವ ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ ತಾ. 18 ರಂದು ಹುದಿಕೇರಿ ಕೊಡವ ಸಮಾಜದಲ್ಲಿ ನಡೆಯಲಿದೆ.

ಕೊಡವ ವiಕ್ಕಡ ಕೂಟದ 6ನೇ ವರ್ಷಾಚರಣೆಯ ಅಂಗವಾಗಿ ನಡೆಯುವ ಕಾರ್ಯಕ್ರಮ ಪೂರ್ವಾಹ್ನ 10 ಗಂಟೆಗೆ ಚೆಕ್ಕೆರ ಕುಟುಂಬದ ಅಧ್ಯಕ್ಷ ಚೆಕ್ಕೆರ ಕೆ. ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟಿರ ಕೆ. ಬಿದ್ದಪ್ಪ ‘ಕೊಡಗ್‍ರ ಸಂಗೀತ ಸಾಹಿತ್ಯ ಕಲಾವಿದಂಗ’ ಎನ್ನುವ ಪುಸ್ತಕ ಹಾಗೂ ಬ್ರಹ್ಮಗಿರಿ ವಾರ ಪತ್ರಿಕೆಯ ಸಂಪಾದಕ ಡಾ. ಉಳ್ಳಿಯಡ ಎಂ. ಪೂವಯ್ಯ ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಎನ್ನುವ ಕನ್ನಡ ಪುಸ್ತಕ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಡಾ. ಕಾಳಿಮಾಡ ಶಿವಪ್ಪ, ವಕೀಲ ಅಜ್ಜಿನಿಕಂಡ ಟಿ. ಭೀಮಯ್ಯ, ಕೊಡವ ವiಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಭಾಗವಹಿಸಲಿರುವರು. ಕವಿ, ಹಾಡುಗಾರ ಚೆಕ್ಕೆರ ತ್ಯಾಗರಾಜ್ ಹಾಗೂ ಬರಹಾಗಾರ್ತಿ ಉಳುವಂಗಡ ಕಾವೇರಿ ಉದಯ ಅವರಿಗೆ ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.