ಮಡಿಕೇರಿ, ಫೆ. 5: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಕ್ಷರ ದಾಸೋಹ ಅಡುಗೆ ಕೊಠಡಿ ಉದ್ಘಾಟನೆ ತಾ. 1 ರಂದು ನೆರವೇರಿತು. ತಾ.ಪಂ. ಸದಸ್ಯೆ ಎಂ.ಬಿ. ಸುನೀತಾ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವನ್ ಚೆಟ್ಟಿಯಪ್ಪ, ಗ್ರಾ.ಪಂ. ಸದಸ್ಯೆ ಎಂ.ಎಂ. ಗಂಗಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷ ಅರಮಣಮಾಡ ಸತೀಶ್ ದೇವಯ್ಯ, ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ಮಾಪಂಗಡ ಸಂಪತ್ ಅಯ್ಯಪ್ಪ, ಮಾಚಂಗಡ ಅಯ್ಯಣ್ಣ, ವಿ.ಈ. ರತ್ನ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಹೆಚ್.ಎಸ್. ಭಾಗ್ಯ, ಉಪಾಧ್ಯಕ್ಷೆ ಹೆಚ್.ಎ. ಸುಧಾ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಹೆಚ್.ಕೆ. ಉಮೇಶ್ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು.