ಮಡಿಕೇರಿ, ಫೆ.5 : ಪಾಲಿಬೆಟ್ಟದ ಆರ್ಕಾಡ್ ದರ್ಗಾ ಷರೀಫ್‍ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಜರತ್ ಪಟ್ಟಾಣ್ ಬಾಬಶಾವಲಿ ಅವರ ಹೆಸರಿನಲ್ಲಿ ಪ್ರತೀವರ್ಷ ನಡೆಸಲಾಗುವ ಉರೂಸ್ ಸಮಾರಂಭ ಫೆ.8 ರಿಂದ 11 ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪಾಲಿಬೆಟ್ಟ ಜಮಾಅತ್ ಹಾಗೂ ಉರೂಸ್ ಕಮಿಟಿ ಅಧ್ಯಕ್ಷ ಸಿ.ಎಂ.ಅಬ್ದುಲ್ ಜಬ್ಬಾರ್ ಅವರು ವಿವರಣೆ ನೀಡಿದರು.

ತಾ. 8ರ ಮಧ್ಯಾಹ್ನ 2ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಪಾಲಿಬೆಟ್ಟ ಜುಮ್ಮಾಮಸೀದಿಯ ಖತೀಬರಾದ ಆಲಿ ಸಖಾಫಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 2.15ಕ್ಕೆ ನಡೆಯುವ ಮೌಲೂದ್ ಪಾರಾಯಣ ಹಾಗೂ ದುಆದ ನೇತೃತ್ವವನ್ನು ಕಡಲುಂಡಿಯ ಸಯ್ಯದ್ ಶಿಹಾಬುದ್ದೀನ್ ಅಲ್‍ಬುಖಾರಿ ಅವರು ವಹಿಸಿಕೊಳ್ಳಲಿದ್ದು, ರಾತ್ರಿ 8 ಗಂಟೆಗೆ ವಾರಣಕ್ಕರದ ಸಯ್ಯದ್ ಸಲಾವುದ್ದೀನ್ ಅಲ್‍ಬುಖಾರಿ ಅವರು ಧಾರ್ಮಿಕ ಉಪನ್ಯಾಸ ಹಾಗೂ ದಿಖ್ರ್ ಮಜ್ಲಿಸ್ ನಡೆಸಿಕೊಡಲಿದ್ದಾರೆ.

ತಾ.9ರಂದುÀ ರಾತ್ರಿ 8.30ಕ್ಕೆ ತ್ರಿಶೂರ್ ಕೂಳಿಮುಟ್ಟಂನ ಮುಹಮ್ಮದ್ ನಜೀಬ್ ಅಜ್ಹಅರಿ ಹಾಗೂ ತಾ.10ರ ರಾತ್ರಿ 8.30ಕ್ಕೆ ಕೊಲ್ಲಂನ ಅಲ್‍ಹಾಫಿಳ್ ತಾಜುದ್ದೀನ್ ಭಾಕವಿ ಅವರುಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ತಾ.11ರ ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಎಡಪಾಲದ ಕೆ.ಎ.ಮಹಮ್ಮೂದ್ ಮುಸ್ಲಿಯಾರ್ ಅವರ ಅಧ್ಯಕ್ಷೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಖತೀಬರಾದ ಆಲಿ ಸಖಾಫಿ ಅವರು ಉದ್ಘಾಟಿಸಲಿದ್ದಾರೆ. ಬೆಟ್ಟದಪುರ ಹಾಗೂ ಅಮ್ಮತ್ತಿ ಕನ್ನಡ ಮಠದ ಪೀಠಾಧ್ಯಕ್ಷ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಪಾಲಿಬೆಟ್ಟ ಅವರ್ ಲೇಡಿ ಆಫ್ ಲೂಡ್ರ್ಸ್ ಚರ್ಚ್‍ನ ಧರ್ಮಗುರು ರೆ.ಫಾ. ಚಾಲ್ರ್ಸ್ ನೊರೊಹ್ನ, ಮೂಡಿಕೆರೆಯ ಅಬ್ದುಲ್ ಅಜೀಜ್ ದಾರಿಮಿ ಅವರುಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಇವರೊಂದಿಗೆ ಉಪವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅಂದು ಸಂಜೆ 6 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಖತೀಬರಾದ ಅಲಿ ಸಖಾಫಿ, ಜಮಾಅತ್ ಕಾರ್ಯದರ್ಶಿ ಖಾಲಿದ್, ಸಹ ಕಾರ್ಯದರ್ಶಿ ಅಬ್ದುಲ್ ರಶೀದ್, ಹಾಗೂ ಖಜಾಂಚಿ ಅಬೂಬಕ್ಕರ್ ಉಪಸ್ಥಿತರಿದ್ದರು.