ಗೋಣಿಕೊಪ್ಪ ವರದಿ, ಫೆ. 5: ಆಂದ್ರಪ್ರದೇಶದ ಗುಂಟೂರುವಿನಲ್ಲಿ ಆರಂಭಗೊಂಡಿರುವ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟ್‍ನಲ್ಲಿ ಕೊಡಗಿನ ಕ್ರೀಡಾಪಟು ಬೊಪ್ಪಂಡ ಕುಸುಮ ಭೀಮಯ್ಯ ಚಿನ್ನದ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ಆರಂಭಗೊಂಡ ಟೂರ್ನಿಯ ಮೊದಲ ದಿನದಲ್ಲಿ 35 ವರ್ಷ ವಯೋಮಿತಿಯ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಚಿನ್ನದ ಪದÀಕ ಗೆದ್ದುಕೊಂಡರು.

ತಾ. 10 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಕೊಡಗಿನಿಂದ 10 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಮಾರಮಾಡ ಮಾಚಮ್ಮ, ಎಂ.ಪಿ. ಪೊನ್ನಮ್ಮ, ಚೇಮಿರ ಸೀತಮ್ಮ, ಕಮಲಮ್ಮ, ಪಿ.ಎಂ. ಅಪ್ಪಯ್ಯ, ಎ. ಜನಾರ್ಧನ, ಎನ್.ಎನ್ ಬಿದ್ದಪ್ಪ, ಬಿ.ಎನ್. ಪೂಣಚ್ಚ, ಹೆಚ್. ಆರ್. ಬುಜಂಗ ಹಾಗೂ ಕೆ. ಎಂ. ಸೋಮಣ್ಣ ತಂಡದಲ್ಲಿದ್ದಾರೆ.