*ಗೋಣಿಕೊಪ್ಪಲು, ಫೆ. 5: ಬಲ್ಯಮಂಡೂರು ಗ್ರಾಮದ ನಿವಾಸಿಗಳಿಗೆ ಜಿ.ಪಂ. ಅನುದಾನದ ರೂ. 8 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಜಿ.ಪಂ. ಸದಸ್ಯೆ ಶ್ರೀಜಸಾಜಿ, ಭೂಮಿಪೂಜೆ ನೆರವೇರಿಸಿದರು. ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯ ಬಲ್ಯಮಂಡೂರು ಗ್ರಾಮದ ನಿವಾಸಿಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿತು. ಗ್ರಾಮಸ್ಥರ ಬೇಡಿಕೆ ಮೇಲೆ ಜಿ.ಪಂ. ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸದಸ್ಯೆ ಶ್ರೀಜಸಾಜಿ ತಿಳಿಸಿದರು. ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಚೋಡುಮಾಡ ಕಾಶಿ, ಮಾಜಿ ಅಧ್ಯಕ್ಷ ಕೊಟ್ಟಂಗಡ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಸಾಜಿ ಅಚ್ಚುತನ್, ಪ್ರಮುಖರಾದ ಹ್ಯಾರಿ, ಕಾರ್ಯಪ್ಪ, ಡಿಕ್ಕಿ, ಗುತ್ತಿಗೆದಾರ ಮಂಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.