ಮಡಿಕೇರಿ, ಫೆ. 5: ಪ್ರಸಕ್ತ (2018-19) ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯು ತಾ.10 ರವರೆಗೆ “ರಸ್ತೆ ಸುರಕ್ಷತೆ - ಜೀವದ ರಕ್ಷೆ” ಎಂಬ ಧ್ಯೇಯ ವಾಕ್ಯದೊಂದಿಗೆ ಪೊಲೀಸ್, ಆರೋಗ್ಯ, ಶಿಕ್ಷಣ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದ್ದು, ಸೋಮವಾರ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಲಾಯಿತು.
ಸಂಚಾರಿ ಸಹಾಯಕ ಪೊಲೀಸ್ ನಿರೀಕ್ಷಕರಾದ ಮಹದೇವ, ಮೋಟಾರು ವಾಹನ ನಿರೀಕ್ಷಕ ಯೋಗೇಶ್ ಹಾಗೂ ಅಧೀಕ್ಷಕ ಶಿವಣ್ಣ ಉಪಸ್ಥಿತರಿದ್ದು, ರಸ್ತೆ ಸುರಕ್ಷತೆ ಜಾಗೃತಿ ಮೂಡಿಸುವ ಬಗ್ಗೆ ಉಪನ್ಯಾಸ ನೀಡಿದರು. ರೀಟಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.