ಸುಂಟಿಕೊಪ್ಪ, ಫೆ. 5: ವಿಕಲಚೇತನ ಮಕ್ಕಳ ಶೃದ್ಧೆ, ದೊಡ್ಡ ಮನಸ್ಸು ಸಾಮಾನ್ಯರಿಗಿಂತ ಹೆಚ್ಚಿದೆ ಸಮಾಜದ ಮುಖ್ಯವಾಹಿನಿಗೆ ವಿಕಲಚೇತನರನ್ನು ತೆರಲು ಎಲ್ಲರೂ ಮುಂದಾಗಬೇಕು ಎಂದು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.ಇಲ್ಲಿನ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಹಾಗೂ ಉದ್ಯೋಗ ಚೀಟಿಯ ವಿತರಣೆಯೊಂದಿಗೆ ಸಾಧನ ಸಲಕರಣೆ ವಿತರಿಸುವ ಮೂಲಕ ಮಾತನಾಡಿದ ಅವರು, ವಿಕಲ ಚೇತನರು ಉದ್ಯೋಗಖಾತ್ರಿ ಯೋಜನೆ ಯನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಸೋಮವಾರಪೇಟೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉಪನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ ಬಿಪಿಎಲ್, ಎಪಿಎಲ್ ಕಾರ್ಡುದಾರರು ವಿಕಲಚೇತನರು ಉದ್ಯೋಗ ಚೀಟಿಯನ್ನು ಪಡೆದುಕೊಂಡು ಕುರಿ, ಕೋಳಿ, ದನ ಸಾಗಾಣಿಕೆ, ಅರಣ್ಯೀಕರಣ, ಸ್ವಸಹಾಯ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿನಯ್ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಲು ವಿಕಲಚೇತನರು ಮುಂದೆ ಬರಬೇಕೆಂದರು ತಿಳಿ ಹೇಳಿದರು.
ನಲ್ಲೂರು ಟಾಟಾ ಕಾಫಿ ಎಸ್ಟೇಟಿನ ಉಪ ಪ್ರಧಾನ ವ್ಯವಸ್ಥಾಪಕ ನಾಚ್ಚಪ್ಪ ಅವರು ಸ್ವಸ್ಥ ವಿಶೇಷ ಶಕ್ಷಣ ಮತ್ತು ಪುನರ್‍ವಸತಿ ಕೇಂದ್ರದ ಮಕ್ಕಳು ರಾಷ್ಟ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಆಟೋಟ,ಸಾಂಸ್ಕøತಿಕ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶಿಸಿದ್ದು ಶ್ಲಾಘನೀಯ ವಾದುದು ವಿಕಲಚೇತನರು ಸ್ವಂತ ಕಾಲಲ್ಲಿ ನಿಲ್ಲಲು ಉದ್ಯೋಗಖಾತ್ರಿ ಯೋಜನೆ ನೆರವಾಗಲಿದೆ ಎಂದು ಹೇಳಿದರು.
ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕಿ ತೇಲಪಂಡ ಆರತಿ ಸೋಮಯ್ಯ ಮಾತನಾಡಿ,
(ಮೊದಲ ಪುಟದಿಂದ) ಇಲ್ಲಿ ಶಿಕ್ಷಣ ಪಡೆಯುತ್ತಿರುವ 150 ವಿಕಲಚೇತನ ಮಕ್ಕಳು ಇಲ್ಲಿಂದ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ಪಡೆದು ಮನೆಗೆ ತೆರಳಿದ ಮೇಲೆ ಬದುಕು ರೂಪಿಸಿಕೊಳ್ಳಲು ಟೈಲರಿಂಗ್ ಮತ್ತಿತರ ಅವಕಾಶ ಕಲ್ಪಿಸಲಾಗುತ್ತಿದ್ದು, ಉದ್ಯೋಗಖಾತ್ರಿ ಯೋಜನೆಯಿಂದ ಸ್ವಾಲಂಬಿ ಬದುಕು ನಡೆಸಲು ಸಹಕಾರಿ ಆಗಲಿದೆ. ಜಿ.ಪಂ. ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ. ಕಾರ್ಯದರ್ಶಿ ಶ್ರೀಧರ್ ಮಾತನಾಡಿದರು. ವೇದಿಕೆಯಲ್ಲಿ ಹರದೂರು ಗ್ರಾ.ಪಂ. ಅಧ್ಯಕ್ಷೆ ಸುಮ, ಹರದೂರು ಗ್ರಾ.ಪಂ. ಪಿಡಿಓ ಬಾಲಕೃಷ್ಣ ರೈ, ಮಾದಾಪುರ ಕಾರ್ಯದರ್ಶಿ ವಿಶ್ವನಾಥ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರೇಖಾ ಪ್ರಾರ್ಥಿಸಿ, ವಿಶೇಷ ಶಿಕ್ಷಕ ಮಂಜುನಾಥ ಸ್ವಾಗತಿಸಿದರು, ಸ್ವಸ್ಥ ಸಂಯೋಜಕ ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಯನ್ನು ಹಾಗೂ ವಿಕಲ ಚೇತನರಿಗೆ ಸಾಧನ ಸಲಕರಣೆ ವಿತರಿಸÀಲಾಯಿತು.
- ರಾಜು ರೈ