ಕೂಡಿಗೆ, ಫೆ. 5: ತೊರೆನೂರಿನ ವೀರಶೈವ ಸಮಾಜದ ವತಿಯಿಂದ ಸಿದ್ಧಗಂಗಾ ಮಠದ ಡಾ. ಸಿದ್ಧಗಂಗಾ ಸ್ವಾಮೀಜಿಗಳ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪಲ್ಲಕ್ಕಿ ರಥದಲ್ಲಿ ಡಾ. ಶಿವಕುಮಾರ್ ಸ್ವಾಮೀಜಿಯವರ ಭಾವಚಿತ್ರವನ್ನಿರಿಸಿ, ಮಹಿಳೆಯರು ಕಲಶದೊಂದಿಗೆ ಗ್ರಾಮದ ಪ್ರಮುಖ ಬೀದಿಯಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ವೀರಶೈವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಪಟ್ಟಣ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ತೊರೆನೂರು ವಿರಕ್ತ ಮಠದ ಮಲ್ಲೇಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಮಹೇಶ್, ವೀರಶೈವ ಸಮಾಜದ ಗೌರವಾಧ್ಯಕ್ಷ ಟಿ.ಎಸ್. ತುಂಗರಾಜ್, ತಾ.ಪಂ. ಮಾಜಿ ಉಪಾಧ್ಯಕ್ಷ ಪಿ.ಕೆ. ಪಾಂಡುರಂಗ, ತೊರೆನೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ವಿವಿಧ ಸಂಘಟನೆಯ ಪ್ರಮುಖರಾದ ಹೆಚ್.ಬಿ. ಚಂದ್ರಪ್ಪ, ಕೆ.ಸಿ. ನಂಜುಂಡಸ್ವಾಮಿ, ಹೆಚ್.ವಿ. ಶಿವಪ್ಪ, ಚೆನ್ನಮಲ್ಲಿಕಾರ್ಜುನಯ್ಯ, ಸೋಮಶೇಖರ್ ಹಾಗೂ ಇನ್ನಿತರರು ಇದ್ದರು.
ಶಿಕ್ಷಕ ಟಿ.ಎನ್. ರಂಜತ್ ಸ್ವಾಗತಿಸಿ, ಟಿ.ಜಿ. ರಮೇಶ್ ವಂದಿಸಿದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.