ಮಡಿಕೇರಿ, ಫೆ. 6: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವದು ಹೇಗೆ ಎಂಬ ಕುರಿತು ಮಡಿಕೇರಿ ತಾಲೂಕಿನ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಮಾರ್ಗದರ್ಶನಾ ಶಿಬಿರವನ್ನು ತಾ. 9 ರಂದು ಬೆಳಿಗ್ಗೆ 9 ರಿಂದ ಅಪರಾಹ್ನ 9 ರವರೆಗೆ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಪಿ.ಪಿ. ಫೌಂಡೇಶನ್ ಮಡಿಕೇರಿಯ ಕ್ರೆಸೆಂಟ್ ಶಾಲೆ, ಹೊಟೇಲ್ ಲೀ ಕೂರ್ಗ್ ಹಾಗೂ ನಾಪೋಕ್ಲುವಿನ ಇನ್‍ಸೈಟ್ ಕನ್ಸಲ್ಟೆನ್ಸಿಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಿದ್ದು, ಶಿಬಿರದಲ್ಲಿ ಪರಿಣಿತರಾದ ಅಮೀನ್ ಇ ಮುದಾಸರ್ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಮಕ್ಕಳೊಂದಿಗೆ ಪೋಷಕರು ಈ ಉಚಿತ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.