ಸಿದ್ದಾಪುರ ಪೆ 6: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ನಡೆದ ಎರಡನೇ ವರ್ಷದ ಎನ್ಪಿಎಲ್ (ನಲ್ವತ್ತೇಕರೆ ಪ್ರೀಮಿಯರ್ ಲೀಗ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಟ್ರೈಕ್ ಫೋರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ನಲ್ವತ್ತೇಕರೆಯ ಒಂದನೇ ಹಾಗೂ ಎರಡನೇ ವಾರ್ಡ್ನ ಹತ್ತು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂ ಕೂರ್ಗ್ ಸ್ಟಾರ್ ತಂಡವು ನಿಗದಿತ 6 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಸ್ಟ್ರೈಕ್ ಫೋರ್ಸ್ ತಂಡವು ನಿಗದಿತ ಓವರ್ನಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲಪಿತು. ಸರಣಿ ಪುರುಷೋತ್ತಮರಾಗಿ ರಾಶಿದ್, ಪಂದ್ಯ ಪುರುಷೋತ್ತಮ ಮಹೇಂದರ್, ಉತ್ತಮ ವಿಕೇಟ್ ಕೀಪರ್ ಆಗಿ ರಿಯಾಜ್, ಉತ್ತಮ ಬೌಲರ್ ನಾಸಿರ್, ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ರಿಯಾಜ್, ಉತ್ತಮ ಕ್ಯಾಚರ್ ತೇಜಿತ್, ಉತ್ತಮ ಆಲ್ರೌಂಡರ್ ಪ್ರಶಸ್ತಿಯನ್ನು ಶಂಶೀರ್ ಪಡೆದುಕೊಂಡರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ಸದಸ್ಯರುಗಳಾದ ಯೋಗೇಶ್, ಮರಿಯಾ, ಸಾಬು ವರ್ಗೀಸ್, ಎನ್.ಪಿ.ಎಲ್. ಕ್ರೀಡಾಕೂಟದ ಅಧ್ಯಕ್ಷ ಪಿ.ಕೆ. ಮಂಜು, ಗ್ರಾಮದ ಪ್ರಮುಖರಾದ ಸುರನ್, ಬೀರಾನ್ ಕುಟ್ಟಿ ಮತ್ತಿತರರು ಹಾಜರಿದ್ದರು.