ವೀರಾಜಪೇಟೆ, ಫೆ. 6: ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಪ್ಯಾರಿಶ್ ಡೇಗೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದಲೈಮುತ್ತು ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಪ್ಯಾರಿಶ್ ಡೇ ಅಂಗವಾಗಿ ಪುರುಷರು ಹಾಗೂ ಮಹಿಳೆಯರಿಗೆ 100 ಮೀ. ಓಟ, ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಪುರುಷರಿಗೆ ಫುಟ್ಬಾಲ್ ಪಂದ್ಯಾಟ ನಡೆಯಿತು. ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ತಲಾ 12 ತಂಡಗಳು ಭಾಗವಹಿಸಿದ್ದವು. ಕಲ್ಲುಬಾಣೆಯ ಸಂತ ಮೇರಿ ಸಮುದಾಯವು ಪಂದ್ಯಾಟಗಳ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸಮಾರಂಭದಲ್ಲಿ ಮಡಿಕೇರಿ ಧರ್ಮಗುರುಗಳಾದ ಆಲ್ಫ್ರೆಡ್ ಮಂಡೊನ್ಸ ಹಾಗೂ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್, ಸಹಾಯಕ ಧರ್ಮಗುರು ರೋಶನ್‍ಬಾಬು ಸೇರಿದಂತೆ ಕನ್ಯಾಸ್ತ್ರೀಯರು ಉಪಸ್ಥಿತರಿದ್ದರು.