ಮಡಿಕೇರಿ, ಫೆ. 6: ಕಿರಗಂದೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಅಧ್ಯಕ್ಷ ಪ್ರಸನ್ನಕುಮಾರ್ ಸೋಲಾರ್ ದೀಪವನ್ನು ವಿತರಿಸಿದರು.

ತುಮಕೂರಿನ ಸಮೃದ್ಧಿ ಸಂಸ್ಥೆ ಹಾಗೂ ಟೋಯಾಟ ಕಂಪೆನಿಯ ಸಹಯೋಗದಲ್ಲಿ ಕೊಡಗಿನಲ್ಲಿ ಮಳೆಯಿಂದ ತೊಂದರೆಗೆ ಒಳಪಟ್ಟ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗದ ಅನುಕೂಲಕ್ಕಾಗಿ ಸೋಲಾರ್ ದೀಪಗಳನ್ನು ನೀಡಲಾಗಿದೆ. ಸಮಾರಂಭದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಆಶಾ, ಮುಖ್ಯ ಶಿಕ್ಷಕ ಡಿ.ಪಿ. ಧರ್ಮಪ್ಪ, ಸಹ ಶಿಕ್ಷಕರಾದ ಇ. ಸುಲೈಮಾನ್, ಹೆಚ್.ಎಂ. ರಮೇಶ್, ಕೆ.ಜಿ. ರಶ್ಮಿ, ಎಸ್.ಹೆಚ್. ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.

ಪರೀಕ್ಷಾ ಕೈಪಿಡಿ ವಿತರಣೆ: ಕಿರಗಂದೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ “ಯಶಸ್ಸು” ಎಂಬ ಪರೀಕ್ಷಾ ಕೈಪಿಡಿಯನ್ನು ವಿತರಿಸಲಾಯಿತು. ರಾಮನಗರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ವಿಷಯಗಳ ಪಾಸಿಂಗ್ ಪ್ಯಾಕೇಜ್ ಪುಸ್ತಕಗಳನ್ನು ನೀಡಿದ್ದು, ಅದನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಸನ್ನ ಉಪಸ್ಥಿತಿಯಲ್ಲಿ ಮುಖ್ಯ ಶಿಕ್ಷಕ ಡಿ.ಪಿ. ಧರ್ಮಪ್ಪ ವಿದ್ಯಾರ್ಥಿಗಳಿಗೆ ವಿತರಿಸಿದರು.

ಈ ಸಂದರ್ಭ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಆಶಾ ಹಾಗೂ ಶಾಲಾ ಶಿಕ್ಷಕರಾದ ಇ. ಸುಲೈಮಾನ್, ಎಸ್.ಹೆಚ್. ಮಂಜುನಾಥ, ಹೆಚ್.ಎಂ. ರಮೇಶ್, ಕೆ.ಜಿ. ರಶ್ಮಿರವರು ಉಪಸ್ಥಿತರಿದ್ದರು.