ಮಡಿಕೇರಿ, ಫೆ. 6 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘಗಳ ಸಹಯೋಗದಲ್ಲಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ -2018 ಮತ್ತು ಸಾಂಸ್ಕøತಿಕ ಹಬ್ಬ ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಿತು.

ಅರೆಭಾಷೆ ಸಾಹಿತ್ಯ ಕ್ಷೇತ್ರ, ಅಧ್ಯಯನ ಹಾಗೂ ಸಂಶೋಧನೆ ಮತ್ತು ಅರೆಭಾಷೆ ಸಂಸ್ಕøತಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಮಂದಿ ಸಾಧಕರನ್ನು 2018 ರ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರೆಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಪೆÇ್ರ| ಕೋಡಿ ಕುಶಾಲಪ್ಪ ಗೌಡ, ಅಧ್ಯಯನ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ದರ್ಬೆ ಮಕ್ಕಳ ಮಂಟಪದ ಡಾ| ಎನ್. ಸುಕುಮಾರ ಗೌಡ ಮತ್ತು ಅರೆಭಾಷೆ ಸಂಸ್ಕøತಿ ಕ್ಷೇತ್ರದಲ್ಲಿ ಮಡಿಕೇರಿಯ ಕಾಳೆಯಂಡ ತಂಗಮ್ಮ ಅಪ್ಪಚ್ಚ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯಲ್ಲಿ ರೂ. 50 ಸಾವಿರದ ಚೆಕ್, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಸಾಧಕರನ್ನು ಸನ್ಮಾನ ಮಾಡಿ, ಮಾತನಾಡಿ ಅರೆಭಾಷೆ ದ.ಕ.ಜಿಲ್ಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದು ನಮ್ಮ ಭೌಗೋಳಿಕ ಆಚಾರ ವಿಚಾರಗಳನ್ನು ತೋರಿಸುವದರ ಜೊತೆಗೆ ಹೃದಯ ಹೃದಯವನ್ನು ಒಟ್ಟು ಮಾಡುವ ಕೆಲಸ ಮಾಡಿದೆ. ವೀರ ಸೇನಾನಿಯಿಂದ ಹಿಡಿದು ರೈತಾಪಿ ವರ್ಗದವರೆಲ್ಲಾ ಅರೆಭಾಷೆಯ ಜೀವನಾಡಿಯಾಗಿದ್ದಾರೆ. ಇಂತಹ ಮಹತ್ವದ ಭಾಷೆಗೆ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಅಕಾಡೆಮಿ ಸ್ಥಾಪಿಸಿದರ ಪರಿಣಾಮ ಇಂದು ಅನೇಕ ಸಾಧಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಅವಕಾಶ ಸಿಕ್ಕಿದೆ ಎಂದರು.

ಶಬ್ದಕೋಶ ರಚನೆಯಾಗಬೇಕು: ಸನ್ಮಾನಿತ ಕೋಡಿ ಕುಶಾಲಪ್ಪ ಗೌಡರು ಮಾತನಾಡಿ ಪ್ರತಿಯೊಂದು ದಾರಿಯಲ್ಲೂ ಹಿರಿಯರು ಮತ್ತು ಕಿರಿಯರು ಅರೆ ಭಾಷೆಯಲ್ಲೇ ವ್ಯವಹಾರ ನಡೆಸಬೇಕು. ಆಗ ಭಾಷೆಗೆ ಪ್ರಾಧಾನ್ಯತೆ ಸಿಗುತ್ತದೆ. ಜೊತೆಗೆ ಕಾವ್ಯ, ಕಥೆ, ಕಾದಂಬರಿ ರಚನೆಗೆ ಪೆÇ್ರೀತ್ಸಾಹ ನೀಡಬೇಕು. ಇದಕ್ಕೆ ಪೂರಕವಾಗಿ ಶಬ್ದಕೋಶ ರಚನೆಯಾಗಬೇಕು ಮತ್ತು ಅರೆಭಾಷೆ ಮಾತನಾಡುವವರ ಸಂಖ್ಯೆಯನ್ನು ಗುರುತಿಸುವ ನಿಟ್ಟಿನಲ್ಲಿ ಕಾನಿಶ್‍ಮಾರಿ ಮಾಡಬೇಕೆಂದರು.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಸನ್ಮಾನಿತರಾದ ಡಾ| ಎನ್.ಸುಕುಮಾರ ಗೌಡರು ಇಂದು ಯಾವ ಸರಕಾರ ಬಂದರೂ ಶಿಕ್ಷಣ ವಿಚಾರಕ್ಕೆ ಗುಣವಿಲ್ಲ. ಬ್ಯಾಗ್‍ನ ಹೊರೆ, ಹೋಮ್ ವರ್ಕ್ ಕಾಟಗಳಿಗೆ ಪರಿಹಾರ ಇದ್ದರೂ ಅದರ ಅಗತ್ಯ ನಮಗಿಲ್ಲ ಎಂದಂತಾಗಿದೆ. ಮಾನವ ಪ್ರೀತಿಗೆ ಒಲಿದು ಸನ್ಮಾನ ಸ್ವೀಕಾರ ಮಾಡಿz್ದÉೀನೆ ಎಂದರು. ಇನ್ನೋರ್ವ ಸನ್ಮಾನಿತೆ ಕಾಳೆಯಂಡ ತಂಗಮ್ಮ ಅಪ್ಪಚ್ಚು ಅವರು ಕೃತಜ್ಞತೆ ಸಲ್ಲಿಸಿದರು. ಅಕಾಡೆಮಿಯ ಸದಸ್ಯರಾದ ಎ.ಕೆ.ಹಿಮಕರ, ಚಿದಾನಂದ ಬೈಲಾಡಿ, ಕಡ್ಲೇರ ತುಳಸಿ ಮೋಹನ್ ಸನ್ಮಾನ ಪತ್ರ ವಾಚಿಸಿದರು.