ಮಡಿಕೇರಿ, ಫೆ. 6: ಭಾರತೀಯ ಸ್ಟೇಟ್ ಬ್ಯಾಂಕ್‍ನ ಜಿಲ್ಲೆಯ 9 ಶಾಖೆಗಳಲ್ಲಿ ತಾ. 11 ರಿಂದ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಗ್ರಾಹಕರಿಗೆ ಸೇವೆ ದೊರೆಯಲಿದೆ. ಬೆಳಿಗ್ಗೆ 10.30 ಯಿಂದ ಸಂಜೆ 4.30 ಗಂಟೆವರೆಗೆ ಎಸ್‍ಬಿಐ ಬ್ಯಾಂಕುಗಳ ಶಾಖೆಗಳಲ್ಲಿ ಸೇವೆ ಇತ್ತು, ಸದ್ಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಗ್ರಾಹಕರಿಗೆ ಸೇವೆ ಲಭ್ಯವಾಗಲಿದೆ ಎಂದು ಮಡಿಕೇರಿ ನಗರದ ಭಾರತೀಯ ಸ್ಟೇಟ್ ಬ್ಯಾಂಕ್‍ನ ವ್ಯವಸ್ಥಾಪಕ ಬಿ. ನರಸಿಂಹಮೂರ್ತಿ ತಿಳಿಸಿದ್ದಾರೆ.