ಸೋಮವಾರಪೇಟೆ, ಫೆ. 6: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ತಾಲೂಕಿನ ಕೊಡ್ಲಿಪೇಟೆ ಎಸ್.ಕೆ.ಎಸ್. ಶಾಲೆಯ 4ನೇ ತರಗತಿ ವಿದ್ಯಾರ್ಥಿ ಎಸ್. ಧನುಷ್ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾನೆ. ಕುಮಿಥೆ ವಿಭಾಗದಲ್ಲಿ ಪ್ರಥಮ, ಯೋಗದಲ್ಲಿ ದ್ವಿತೀಯ ಮತ್ತು ಕತಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿರುವ ಧನುಷ್, ಕಟ್ಟೆಪುರದ ಸಂತೋಷ್ ಮತ್ತು ಶ್ವೇತಾ ದಂಪತಿ ಪುತ್ರ. ಈತನಿಗೆ ಕರಾಟೆ ಶಿಕ್ಷಕ ಅರುಣ್ ಅವರು ತರಬೇತಿ ನೀಡಿದ್ದಾರೆ.