ವೀರಾಜಪೇಟೆ, ಫೆ. 6: ಇಲ್ಲಿನ ಕಾವೇರಿ ಪದವಿ ಕಾಲೇಜು ಪುರುಷರ ಹಾಕಿ ತಂಡವು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಬಲಿಷ್ಟ ತಂಡವಾದ ಸೆಂಟ್ ಜೋಸೆಫ್ ಕಾಲೇಜು ತಂಡವನ್ನು 1-0 ಗೋಲಿನಿಂದ ಮಣಿಸಿ ಗೆಲುವಿನ ನಗೆ ಬೀರಿತು. ತಂಡದ ಮುನ್ನಡೆ ಆಟಗಾರ ಸಿ.ಎಂ. ಬೋಪಣ್ಣ ಅತ್ಯುತ್ತಮ ಫಾರ್ವಡ್ ಪ್ರಶಸ್ತಿ ಮತ್ತು ಇನ್ನೋರ್ವ ಆಟಗಾರ ಜಾನ್ ಪೌಲ್ ಅತ್ಯುತ್ತಮ ಮಿಡ್ ಫೀಲ್ಡ್ ಪ್ರಶಸ್ತಿಯನ್ನು ಪಡೆದುಕೊಂಡರು. ತರಬೇತು ದಾರರಾಗಿ ಕಾವೇರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಎಂ.ಎ. ನಾಚಪ್ಪ ಕಾರ್ಯನಿರ್ವಹಿಸಿದ್ದರು. ಕಾವೇರಿ ಪದವಿ ಕಾಲೇಜಿನ ದೈಹಿಕ ಶಿಕ್ಷಕಿ ಡಾ. ಎಂ.ಎಂ. ದೇಚಮ್ಮ ತಂಡದ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು.