ಸೋಮವಾರಪೇಟೆ, ಫೆ. 6: ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸಗಳ ಮಾರಾಟದ ಮೇಲೆ ನಿರ್ಬಂಧವನ್ನು ಹೇರಬೇಕು, ಮಂದಿರಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು, ಸರಕಾರವು ತಕ್ಷಣ ಕಾನೂನನ್ನು ಮಾಡಿ ಶ್ರೀ ರಾಮಮಂದಿರವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಮಿತಿಯ ಪದಾಧಿಕಾರಿಗಳು ಇಲ್ಲಿನ ತಹಶೀಲ್ದಾರ್‍ರಿಗೆ ಮನವಿ ಪತ್ರ ಸಲ್ಲಿಸಿದರು.

ಧರ್ಮ ಶಿಕ್ಷಣದಿಂದ ನೈತಿಕತೆ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾಲಯಗಳಲ್ಲಿ ಹಿಂದೂಗಳಿಗೆ ಪ್ರತಿದಿನ ಅವರ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ನೀಡಲಾಯಿತು. ಈ ಸಂದರ್ಭ ರಾಷ್ಟ್ರೀಯ ಹಿಂದೂ ಆಂದೋಲನ ಘಟಕದ ಪದಾಧಿಕಾರಿಗಳಾದ ಸೋಮೇಶ್, ಲಕ್ಷೀಶ್, ನೆಹರು, ಸುಬ್ಬಯ್ಯ, ಈರಪ್ಪ, ರಮೇಶ್, ಪೊನ್ನಪ್ಪ, ಬಸಪ್ಪ ಇತರರು ಉಪಸ್ಥಿತರಿದ್ದರು.