ಕುಶಾಲನಗರ, ಫೆ. 6: ಕೊಡಗು ಜಿಲ್ಲಾ ಪೊಲೀಸ್, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸ್ಥಳೀಯ ಫಾತಿಮಾ ಕಾನ್ವೆಂಟ್ ಸಭಾಂಗಣದಲ್ಲಿ ನಡೆಯಿತು.
ಫಾತಿಮಾ ಕಾನ್ವೆಂಟ್ ಮುಖ್ಯ ಶಿಕ್ಷಕಿ ಸಿಸ್ಟರ್ ಜಸ್ವಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದÀರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲಿಸುವತ್ತ ಮುಂದಾಗಬೇಕಿದೆ. ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವದರೊಂದಿಗೆ ನಿಯಮವನ್ನು ಉಲ್ಲಂಘಿಸುವವರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಅತಿವೇಗದ ಚಾಲನೆ, ಅಜಾಗರೂಕತೆ ಚಾಲನೆಯಿಂದ ಅಪಾಯದ ಅರಿವು ಹೊಂದಬೇಕು ಎಂದರು. ಎಚ್ಚರಿಕೆಯಿಂದ ತಮ್ಮ ದ್ವಿಚಕ್ರ ವಾಹನಗಳ ಚಲಾಯಿಸುವಂತೆ ಕೋರಿದರು.