ಶನಿವಾರಸಂತೆ, ಫೆ. 6: ಚನ್ನರಾಯಪಟ್ಟಣದಿಂದ ಮಾಕುಟ್ಟವರೆಗಿನ ರಾಷ್ಟ್ರೀಯ ಹೆದ್ದಾರಿ ಹೋಳೆನರಸಿಪುರ, ಅರಕಲಗೂೀಡು, ಕೊಡ್ಲಿಪೇಟೆ, ಶನಿವಾರಸಂತೆ ಮೂಲಕ ಹಾದು ಹೋಗಬೇಕಾಗಿದ್ದು, ಈಗಿನ ಬೆಳವಣಿಗೆಯ ಪ್ರಕಾರ ಕೆಲವರ ಪಿತೂರಿಯಿಂದ ಕೊಡ್ಲಿಪೇಟೆಗೆ ಕಡಿತ ಗೊಳಿಸಿ ಮಲ್ಲಿಪಟ್ಟಣದಿಂದ ಶನಿವಾರಸಂತೆಗಾಗಿ ಸಾಗಲಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕೊಡ್ಲಿಪೇಟೆಯ ಸರ್ವ ಪಕ್ಷಗಳ ಮುಖಂಡರುಗಳು ಅಂಬೆಡ್ಕರ್ ಭವನದಲ್ಲಿ ಡಾ. ಉದಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಇದರ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.
ಇಲಾಖೆಗೆ ಸಂಬಂಧಪಟ್ಟ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವದು, ಹೋರಾಟ ನಡೆಸುವದು, ಬಂದ್‍ಗೆ ಕರೆಕೊಡುವದು. ಸೇರಿದಂತೆ ಇನ್ನಿತರ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗ್ ಜೇಬ್, ಜೆಡಿಎಸ್ ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್ ಕುಮಾರ್, ಬಿಜೆಪಿ ಮುಖಂಡ ಭಗವಾನ್ ಗೌಡ. ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯ್, ಮುಖಂಡರುಗಳಾದ ಮಹಮ್ಮದ್ ಹನೀಫ್, ಕಾಂತರಾಜ್, ವಹಾಬ್, ಸುಬ್ರಮಣ್ಯ, ಪ್ರಕಾಶ್, ಕೆಂಚೆಶ್ವರ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಸಭೆಯಲ್ಲಿ ಹಾಜರಿದ್ದರು.