ಮಡಿಕೇರಿ, ಫೆ. 6: ಗುಂಡ್ಲುಪೇಟೆಯಿಂದ ಬಿಳಿಗೇರಿಯ ತೋಟವೊಂದರಲ್ಲಿ ಕಾಫಿ ಹಾಗೂ ಕರಿಮೆಣಸು ಕುಯಿಲಿಗೆ ಬಂದಿದ್ದ ಕಾರ್ಮಿಕರ ತಂಡದ ವ್ಯಕ್ತಿಯೋರ್ವ ಇಂದು ಬೆಳಿಗ್ಗೆ ವಿದ್ಯುತ್ ಆಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಗುಂಡ್ಲುಪೇಟೆ ಮುಕ್ತಿ ಕಾಲೋನಿ ನಿವಾಸಿ ಚಿಕ್ಕಸಿದ್ಧ (32) ಎಂಬಾತನೇ ಮೃತ ದುರ್ದೈವಿ.
ಅದೇ ಗ್ರಾಮದ ಜಯಮ್ಮ ಎಂಬಾಕೆಯ ತಂಡದಲ್ಲಿ 15 ಮಂದಿ ಕಾರ್ಮಿಕರು ತೋಟ ಕೆಲಸಕ್ಕೆ ಎರಡು ವಾರದ ಹಿಂದೆ ಬಂದಿದ್ದು, ಬಿಳಿಗೇರಿಯ ನಿವಾಸಿ, ಪಿ. ನಾಗೇಶ್ ಎಂಬವರ ತೋಟದಲ್ಲಿ ಇಂದು ಬೆಳಿಗ್ಗೆ 8.30ರ ಸುಮಾರಿಗೆ ಆಗಷ್ಟೇ ಫಸಲು ಕುಯ್ಲು ಆರಂಭಿಸಿದ್ದಾರೆ.