ವೀರಾಜಪೇಟೆ, ಫೆ. 6: ಪೊಲೀಸ್ ಇಲಾಖೆ ವೀರಾಜಪೇಟೆ ಉಪ ವಿಭಾಗ ಮತ್ತು ಕ್ಲಬ್ ಮಹೀಂದ್ರಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಇಂದು ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತು. ತಾಲೂಕು ಮೈದಾನದಲ್ಲಿ ಬೈಕ್ ಜಾಥಾಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಮತ್ತು ತಾಲೂಕು ದÀಂಡಾಧಿಕಾರಿಗಳಾದ ಗೋವಿಂದರಾಜು ಅವರುಗಳು ಚಾಲನೆ ನೀಡಿದರು. ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮತ್ತು ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಸಿಬ್ಬಂದಿಗಳು ಮತ್ತು ಕ್ಷಬ್ ಮಹೀಂದ್ರ ಸಂಸ್ಥೆಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.