*ಗೋಣಿಕೊಪ್ಪಲು, ಫೆ. 6: ಹತ್ತು ಲಕ್ಷ ಅನುದಾನದಲ್ಲಿ ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಕೊಟ್ಟಗೇರಿ, ದೋಣಿಕಡವು ಸೇತುವೆ ತಡೆಗೋಡೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ತಾಲೂಕು ಬಿಜೆಪಿ ಮಂಡಳಿ ಅಧ್ಯಕ್ಷ ಅರುಣ್ ಭೀಮಯ್ಯ, ಕಾರ್ಯದರ್ಶಿ ಲಾಲ ಭೀಮಯ್ಯ, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಆರ್.ಎಂ.ಸಿ. ಸದಸ್ಯ ಸುಜಾ ಬೋಪಯ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ಚಂಗಪ್ಪ, ಬಾಳೆಲೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಸುಕೇಶ್, ಪ್ರಮುಖರಾದ ಬೋಸ್ ಮಂದಣ್ಣ, ಚಕ್ಕೇರ ಸೂರ್ಯ, ಅರಮಣಮಾಡ ಸತೀಶ್, ಮೇಚಂಡ ಸಾಬು ಮಂದಣ್ಣ, ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಅರಮಣಮಾಡ ರಂಜನ್ ಹಾಜರಿದ್ದರು.