ಸೋಮವಾರಪೇಟೆ, ಫೆ.6: ತೋಟಗಾರಿಕಾ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ತೋಟಗಾರಿಕಾ ಮಹಾ ಮಂಡಳದ ರೂ. 4ಲಕ್ಷ ಅನುದಾನದಡಿ ನಿರ್ಮಿಸಲಾಗಿರುವ ಹಣ್ಣು ತರಕಾರಿ ಮಾರಾಟ ಕೇಂದ್ರವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸಿದರು.ಇಲ್ಲಿನ ಮಡಿಕೇರಿ ರಸ್ತೆಯ ವಿವೇಕಾನಂದ ವೃತ್ತದಲ್ಲಿ ನಿರ್ಮಿಸಲಾಗಿರುವ ನೂತನ ಕೇಂದ್ರಕ್ಕೆ ಚಾಲನೆ ನೀಡಿದ ಲೋಕೇಶ್ವರಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಈ ಕೇಂದ್ರದಲ್ಲಿ ಹಣ್ಣು-ತರಕಾರಿಗಳನ್ನು ಖರೀದಿಸಬಹುದು. ನೂತನ ಕೇಂದ್ರ ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಮಾದರಿಯಾಗಲಿ ಎಂದು ಆಶಿಸಿದರು.ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಮಡಿಕೇರಿ ಇದರ ಅಧ್ಯಕ್ಷ ರಮೇಶ್ ಚಂಗಪ್ಪ ಮಾತನಾಡಿ, ಸೋಮವಾರ ಪೇಟೆಯಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರವನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.ಈ ಸಂದರ್ಭ ಜಿ.ಪಂ. ಸದಸ್ಯರುಗಳಾದ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ಹಾಪ್‍ಕಾಮ್ಸ್ ಜಿಲ್ಲಾ ಉಪಾಧ್ಯಕ್ಷ ರತೀಶ್, (ಮೊದಲ ಪುಟದಿಂದ) ನಿರ್ದೇಶಕರುಗಳಾದ ಎಸ್.ಪಿ. ಪೊನ್ನಪ್ಪ, ಪಾಡಿಯಮ್ಮಂಡ ಮನು ಮಹೇಶ್, ಲೀಲಾ ಮೇದಪ್ಪ, ಉಮೇಶ್‍ರಾಜೇ ಅರಸ್, ಬೇಬಿ ಪೂವಯ್ಯ, ವ್ಯವಸ್ಥಾಪಕ ಪ್ರಮೋದ್, ಕಾರ್ಯದರ್ಶಿ

ಹೆಚ್.ಕೆ. ರೇಷ್ಮ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.