ಮಡಿಕೇರಿ, ಫೆ. 7: ಪೋಸ್ಟ್ಮೆನ್ ಮತ್ತು ಎಂ.ಟಿ.ಯಸ್. ಸಂಘಟನೆಯ 9ನೇ ದ್ವೈ ವಾರ್ಷಿಕ ಅಧಿವೇಶನ ಮಡಿಕೇರಿಯ ಬಾಲಭವನದಲ್ಲಿ ನಡೆಯಿತು. ಪಿ.ಕೆ. ನಾಣಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕರ್ನಾಟಕ ವಲಯ ಸಂಘದ ಅಧ್ಯಕ್ಷ ವಿಜಯನಾಯರ್ ಕಾರ್ಯಕ್ರಮ ಉದ್ಘಾಟಿಸಿದರು.
ಟಿ.ಪಿ. ಹರೀಶ್ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಬೇಬಿ ಜೋಸೆಫ್ ಸ್ವಾಗತಿಸಿದರು. ವೇದಿಕೆಯಲ್ಲಿ ಅಂಚೆ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಪಿ. ಮಲ್ಲಿಕಾರ್ಜುನ, ಅಂಚೆ ಅಧೀಕ್ಷಕ ಯಸ್.ಆರ್. ನಾಗೇಂದ್ರ, ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಹಿಂದಿ ಉಪನ್ಯಾಸಕ ಶ್ರೀಧರ ಹೆಗ್ಗಡೆ, ಮುಖ್ಯ ಅಂಚೆ ಕಚೇರಿ ಅಂಚೆಪಾಲಿ ಸಿ.ಕೆ. ಸೀತಮ್ಮ, ಕೋಲಾರ ಕೆ.ಜಿ.ಎಫ್.ನ ಪೋಸ್ಟ್ ಮಾಸ್ಟರ್ ಯಂ.ಕೆ. ಮೋಹನ್, ಸೋಮವಾರಪೇಟೆ ಅಂಚೆ ನಿರೀಕ್ಷಕ ಬಿ.ಡಿ. ಮಂಜುನಾಥ್, ನಿವೃತ್ತ ಪೋಸ್ಟ್ ಮಾಸ್ಟರ್ ಬಿ.ಜಿ. ಉಮೇಶ್ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಸಮಾರಂಭದಲ್ಲಿ ನಿವೃತ್ತ ನೌಕರರನ್ನು, ಮುಖ್ಯ ಅತಿಥಿಗಳನ್ನು ಸನ್ಮಾನಿಸುವದರೊಂದಿಗೆ ಕೊಡಗು ಅಂಚೆ ವಿಭಾಗದಿಂದ ವರ್ಗಾವಣೆಗೊಳ್ಳುತ್ತಿರುವ ಎಸ್.ಆರ್. ನಾಗೇಂದ್ರ ಅವರನ್ನು ಬೀಳ್ಕೊಡಲಾಯಿತು.
ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪಿ.ಕೆ. ನಾಣಯ್ಯ, ಉಪಾಧ್ಯಕ್ಷರಾಗಿ ಕೆ.ಯಂ. ಸೋಮಪ್ಪ, ಕಾರ್ಯದರ್ಶಿಯಾಗಿ ಬೇಬಿ ಜೋಸೆಫ್, ಸಹ ಕಾರ್ಯದರ್ಶಿಯಾಗಿ ಯನ್.ಬಿ. ರವೀಂದ್ರ, ಖಜಾಂಚಿಯಾಗಿ ಯನ್.ಪಿ. ಭಾಗ್ಯಲಕ್ಷ್ಮಿ ಹಾಗೂ ಎಂಟು ಸದಸ್ಯರನ್ನು ನೂತನ ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಯಿತು.
ರವೀಂದ್ರ ಕಾರ್ಯಕ್ರಮ ನಿರೂಪಿಸಿ, ಯಂ. ಗಣೇಶ್ ವಂದಿಸಿದರು.