ವೀರಾಜಪೇಟೆ, ಫೆ. 7: ಸರಕಾರದಿಂದ ಬಂದ ಅನುದಾನದಲ್ಲಿ ಗ್ರಾಮೀಣ ಭಾಗದ ಕೆಲವೇ ರಸ್ತೆಗಳ ಕಾಮಗಾರಿ ಮುಗಿದಿದ್ದು ಉಳಿದ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿರುವದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪೇಟೆ ಬೀರಾಂಗಾಡು ರಸ್ತೆಗೆ 2017-18ನೇ ಸಾಲಿನ ನಗರೋತ್ತಾನ ಯೋಜನೆಯಡಿಯಲ್ಲಿ ರೂ. 5 ಲಕ್ಷದಲ್ಲಿ ನಡೆದ ಕಾಂಕ್ರಿಟ್ ರಸ್ತೆ ಉದ್ಘಾಟಿಸಿದ ಶಶಿ ಸುಬ್ರಮಣಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದು, ಈಗಾಗಲೇ ರಸ್ತೆ ಕಾಮಗಾರಿ ಕೊಡಗು ಪ್ಯಾಕೇಜ್ ಹಾಗೂ ಪ್ರಕೃತಿ ವಿಕೋಪದ ಅನುದಾನದಲ್ಲಿ ಪ್ರಾರಂಭಗೊಂಡಿರುವದಾಗಿ ಹೇಳಿದರು. ಕಾಂಕ್ರಿಟ್ ರಸ್ತೆ ಉದ್ಘಾಟನೆ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ರಘು ನಾಣಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಆಶಾ ಸುಬ್ಬಯ್ಯ, ಸುನೀತ ಜುನಾ, ಹರ್ಷವರ್ಧನ್, ಟಿ.ಕೆ. ಯಶೋಧ, ಹೆಚ್.ಎಂ. ಪೂರ್ಣಿಮ, ಟಿ.ಆರ್. ಸುಸ್ಮಿತ, ಮುಂತಾದವರು ಉಪಸ್ಥಿತರಿದ್ದರು.