ಮಡಿಕೇರಿ, ಫೆ. 7: ವೀರಾಜಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಅಗಲಿದ ಹಿರಿಯ ಚೇತನಗಳಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ರಸ್ತೆಗಳು ಸಂಪೂರ್ಣವಾಗಿ ದುಸ್ಥಿತಿಯಲ್ಲಿದ್ದು, ಸದರಿ ರಸ್ತೆಗಳ ದುರಸ್ತಿಗಳ ಬಗ್ಗೆ ಚರ್ಚೆಯಾಗಿ ಪಟ್ಟಣ ಪಂಚಾಯಿತಿ ಗಮನಕ್ಕೆ ತರುವಂತೆ ತೀರ್ಮಾನಿಸಲಾಯಿತು. ವೀರಾಜಪೇಟೆ ಸರಕಾರಿ ಆಸ್ಪತ್ರೆ ಅವ್ಯವಸ್ಥೆಗಳ ತಾಣವಾಗಿದೆ. ಇಲ್ಲಿ ಬಡರೋಗಿಗಳ ಬಳಿ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಅವೈಜ್ಞಾನಿಕವಾಗಿ ಉದ್ಯಾನವನ ನಿರ್ಮಿಸಲಾಗಿದೆ. ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಬಗ್ಗೆ ಸಭೆ ಚರ್ಚಿಸಿತು. ಈ ವೇಳೆ ಕಾಂಗ್ರೆಸ್ ಪ್ರಮುಖರುಗಳಾದ ಡಿ.ಸಿ. ದ್ರುವ, ಎಂ.ಎಸ್. ಪೂವಯ್ಯ, ಏಜಾಸ್ ಅಹಮ್ಮದ್, ಮಾಳೇಟಿರ ಕಾಶಿ, ಎಂ.ಎಂ. ಶಶಿಧರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಪ್ರಥ್ವಿನಾಥ್, ಮೊಹಮ್ಮದ್ ರಾಫಿ, ಡಿ.ಪಿ. ರಾಜೇಶ್, ಬೆನ್ನಿ, ತಸ್ಸಿಯ, ಮಾಜಿ ಸದಸ್ಯೆ ಶೀಬಾ ಪ್ರಥ್ವಿನಾಥ್ ಮೊದಲಾದವರು ಪಾಲ್ಗೊಂಡಿದ್ದರು.