ವೀರಾಜಪೇಟೆ, ಫೆ. 7: ಕೇಂದ್ರ ಸರಕಾರದ ಅನಿಲ ಉಜ್ವಲ ಯೋಜನೆಯ ಅಂಗವಾಗಿ ಇಲ್ಲಿನ ಪುರಭವನದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಾಲೂಕಿನ ಸುಮಾರು 127 ಮಂದಿ ಅನಿಲ ರಹಿತ ಬಡವರಿಗೆ ಅಡುಗೆ ಅನಿಲದ ಕಿಟ್ನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಕೆ.ಜಿ. ಬೋಪಯ್ಯ, ಕೇಂದ್ರ ಸರಕಾರ ಭಾರತವನ್ನು ಹೊಗೆ ರಹಿತ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಮಹತ್ತರ ಯೋಜನೆ ಇದಾಗಿದೆ ಎಂದರು. ಪ್ರತಿಯೊಬ್ಬ ಫಲಾನುಭವಿಗಳು ಇದರ ಸೌಲಭ್ಯವನ್ನು ಪಡೆಯುವಂತಾಗಲಿ ಎಂದರು.
ಅಡುಗೆ ಅನಿಲ ಕಿಟ್ ವಿತರಣೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ರೀನಾ ಪ್ರಕಾಶ್, ರಘು ನಾಣಯ್ಯ, ಅಜಿತ್ ಕರುಂಬಯ್ಯ, ಯಮುನಾ ಚಂಗಪ್ಪ, ಮಧು ದೇವಯ್ಯ, ಜೋಕಿಂ, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ರವಿರಾಜ್ ಗ್ಯಾಸ್ ಸಂಸ್ಥೆಯ ಎನ್. ಪರಮಶಿವ, ವಿಷ್ಣುಪ್ರಿಯ, ಬಿಜೆಪಿಯ ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.