ಪೊನ್ನಂಪೇಟೆ, ಫೆ. 7: ಪೊನ್ನಂಪೇಟೆ ನೂತನ ತಾಲೂಕು ರಚನೆ ಹಾಗೂ ಈ ಬಗ್ಗೆ ಮುಂಗಡ ಪತ್ರದಲ್ಲಿ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ನಾಗರಿಕ ವೇದಿಕೆ ಸತತ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಜಿಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ನೇತೃತ್ವದಲ್ಲಿ ಕಂದಾಯ ಸಚಿವರಾದ ದೇಶ್‍ಪಾಂಡೆ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಈಗಾಗಲೆ ತಾವು ಮುಖ್ಯಮಂತ್ರಿಗಳೊಂದಿಗೆ ನೂತನ ತಾಲೂಕು ರಚನೆಯ ಬಗ್ಗೆ ಚರ್ಚಿಸಿರುವದಾಗಿ ಮಾಹಿತಿ ನೀಡಿದರು. ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ.ಪೂಣಚ್ಚ, ಹಾಗೂ ಸದಸ್ಯರುಗಳಾದ ಚೆಪ್ಪುಡೀರ ಪೊನ್ನಪ್ಪ, ಜಿಮ್ಮಿ ಅಣ್ಣಯ್ಯ, ಆಲೀರ ಎರ್ಮು ಹಾಜಿ, ಹಾಗೂ ಬೆಂಗಳೂರಿನ ವಕೀಲ ಮಾಚಿಮಂಡ ಎಂ. ಐಯ್ಯಪ್ಪ ಹಾಜರಿದ್ದರು.