ಭಾಗಮಂಡಲ, ಫೆ. 7: 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಪೊಲೀಸರಿಂದ ಹೆಲ್ಮೆಟ್ ಧರಿಸಿ ಬೈಕ್ ಜಾಥಾ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಜಾಥಾಕ್ಕೆ ಭಾಗಮಂಡಲ ಕೆವಿಜಿ ಕಾಲೇಜಿನ ಉಪನ್ಯಾಸಕ ವೇಣುಗೋಪಾಲ್ ಚಾಲನೆ ನೀಡಿದರು. ವೃತ್ತ ನಿರೀಕ್ಷಕ ಸಿದ್ಧಯ್ಯ ಮಾತನಾಡಿ, ದ್ವಿಚಕ್ರ ವಾಹನ ಚಾಲನೆ ಮಾಡುವ ಸಂದರ್ಭ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿರಬೇಕು. ಇತರ ವಾಹನ ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿರಬೇಕು. ವಾಹನ ಚಾಲಕರು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಪ್ರಬಾರ ಎಎಸ್‍ಐ ಅಪ್ಪಾಜಿ ಹಾಗೂ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು. ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಚಾಲಕರು ಪಾಲ್ಗೊಂಡಿದ್ದರು.