ಸಿದ್ದಾಪುರ, ಫೆ. 7: ತಾ. 4 ರಂದು ಕಾಲೇಜಿನಿಂದ ಹಿಂತಿರುಗಿ ಮನೆಯತ್ತ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳು ಸಂಶಯಾಸ್ಪದ ರೀತಿಯಲ್ಲಿ ಕಾಣೆಯಾದ ಹಿನ್ನೆಲೆಯಲ್ಲಿ, ನಾಪತ್ತೆಯಾದ ವಿದ್ಯಾರ್ಥಿನಿಯ ಪತ್ತೆಗಾಗಿ ಪೋಷಕರೊಂದಿಗೆ ಸ್ಥಳೀಯ ತೋಟ ಕಾರ್ಮಿಕರು ಹುಡುಕಾಟ ನಡೆಸುತ್ತಿದ್ದು, ಇಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ, ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ, ತೋಟದ ವಾಚ್ ಮ್ಯಾನ್ ಕಾಲೇಜಿನಿಂದ ಮನೆಯತ್ತ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸೋಮವಾರದಂದು ನೋಡಿದ್ದ ಸ್ಥಳದಲ್ಲಿದ್ದ ತೋಟದ ಕೆರೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಸಂಬಂಧಿಕರು ಕೂಡ ಹುಡುಕಾಟದಲ್ಲಿ ತೊಡಗಿದ್ದಾರೆ.