ಕುಶಾಲನಗರ, ಫೆ. 8: ಕೂಡುಮಂಗಳೂರಿನ ಶ್ರೀ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರಥಮ ವರ್ಷದ ಕೆವಿಎಲ್ ಲೀಗ್ ವಾಲಿಬಾಲ್ ಪಂದ್ಯಾವಳಿ ಕೂಡಮಂಗಳೂರು ಬಸವೇಶ್ವರ ಆಟದ ಮೈದಾನದಲ್ಲಿ ಮಾ.4 ರಂದು ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರತೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾಟ ವಿಜೇತರಿಗೆ ಪ್ರಥಮ ಬಹುಮಾನ ರೂ. 22,222 ಮತ್ತು ಟ್ರೋಫಿ, ದ್ವಿತೀಯ ಬಹುಮಾನ 12,222 ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನವಾಗಿ ರೂ. 7,777 ಹಾಗೂ ಟ್ರೋಫಿ ನೀಡಲಾಗುವದು.

ವಾಲಿಬಾಲ್ ಪಂದ್ಯಾಟ ಲೀಗ್ ಮಾದರಿಯಲ್ಲಿ ಹಗಲು ರಾತ್ರಿ ನಡೆಯಲಿದೆ. ಕೂಡಮಂಗಳೂರು ಗ್ರಾಮದ ಮಹಿಳೆಯರಿಗೆ ಹಗ್ಗಜಗ್ಗಾಟ, ಮ್ಯುಸಿಕಲ್ ಚೇರ್ ಹಾಗೂ ಬಾಂಬ್ ಇನ್ ದಿ ಸಿಟಿ ಆಟೋಟಗಳು, ನಡೆಯಲಿದೆ.

ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಮೊಬೈಲ್ ಸಂಖ್ಯೆ 8050125034 ಸಂಪರ್ಕಿಸಲು ಕೋರಿದ್ದಾರೆ.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ಪವನ್‍ಗೌಡ, ಕಾರ್ಯದರ್ಶಿಗಳಾದ ಸುಭಾಶ್ ಗೌಡ, ಸಾಗರ್ ಇದ್ದರು.