ಮಡಿಕೇರಿ, ಫೆ. 8: ಪ್ರಗತಿಪರ ಸೇವಾ ಸಂಸ್ಥೆ ಮಂಡ್ಯ ಇವರು ನಡೆಸಿದ 2018-19ನೇ ಸಾಲಿನ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜಯ ಶಾಲೆಯ ಮಕ್ಕಳು ಭಾಗವಹಿಸಿದ್ದು, ಅವರಲ್ಲಿ ಐವರು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆಯೊಂದಿಗೆ ಹೊರಹೊಮ್ಮಿದ್ದಾರೆ.
1ನೇ ತರಗತಿಯ ಶೆಹಲ ಎಂ.ಎಸ್. ತಾಲೂಕು ಮಟ್ಟದಲ್ಲಿ 1ನೇ ರ್ಯಾಂಕ್, 2ನೇ ತರಗತಿಯ ರಿಫಾಶರಿನ್ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್, 4ನೇ ತರಗತಿಯ ಶ್ರೀಇನಿಯ ಜಿಲ್ಲಾ ಮಟ್ಟದಲ್ಲಿ 1ನೇ ರ್ಯಾಂಕ್ ಪಡೆದಿರುತ್ತಾಳೆ.
5ನೇ ತರಗತಿಯ ಮಾನ್ಯ ಎಂ.ಜಿ. ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆದಿರುತ್ತಾಳೆ. 7ನೇ ತರಗತಿಯ ಫಾಹಿನಾ ಟಿ.ಎ. ತಾಲೂಕು ಮಟ್ಟದಲ್ಲಿ 1ನೇ ರ್ಯಾಂಕ್ ಪಡೆದಿರುತ್ತಾಳೆ.
ಈ ಎಲ್ಲಾ ವಿಜೇತರನ್ನು ಇದೇ 70ನೇ ಗಣರಾಜ್ಯೋತ್ಸವ ಸಮಾರಂಭ ದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಲ್ಯಂಡ ಬಿದ್ದಪ್ಪ, ಕಾರ್ಯದರ್ಶಿ ಕಾಂಗೀರ ರವಿ ಮಾಚಯ್ಯ, ವ್ಯವಸ್ಥಾಪಕ ಬೊಳಕಾರಂಡ ಅಯ್ಯಣ್ಣ, ಶಾಲಾ ಮುಖ್ಯೋಪಾಧ್ಯಾಯರಾದ ಸೋಮಶೇಖರ್, ಬೋಜಮ್ಮ ಬಹುಮಾನ ನೀಡಿ ಸನ್ಮಾನಿಸಿದರು.
ಉಭಯ ಶಾಲಾ ಶಿಕ್ಷಕಿಯಾದ ದರ್ಶಿನಿ ಕೆ.ಟಿ. ಅವರನ್ನು ರಾಜ್ಯ ಕಲಾ ಸೇವಾ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಉಭಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.