ಮಡಿಕೇರಿ, ಫೆ. 8: ಅಂದಗೋವೆ ಗ್ರಾಮ, 7ನೇ ಹೊಸಕೋಟೆ, ಕಲ್ಲುಕೋರೆಯ ಶ್ರೀ ಭದ್ರಕಾಳಿ, ನಾಗ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನೆ; ಬ್ರಹ್ಮಕಲ ಶೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಿ. ರಾಮಕೃಷ್ಣ ಕಲ್ಲೂರಾಯ ನೇತೃತ್ವದಲ್ಲಿ ಇತ್ತೀಚೆಗೆ ನೆರವೇರಿತು. ಆಡಳಿತ ಮಂಡಳಿಯವರು, ಅಕ್ಕ ಪಕ್ಕದ ಊರಿನಿಂದ ಅತ್ಯಧಿಕ ಸಂಖ್ಯೆ ಯಲ್ಲಿ ಭಕ್ತಾಧಿಗಳು ಆಗಮಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು, ಎರಡು ದಿನ ಅನ್ನದಾನ ಆಯೋಜಿಸಿದ್ದರು.

ಅಧ್ಯಕ್ಷ ಮುರುಗೇಶ ಮಾರ್ಗ ದರ್ಶನದಲ್ಲಿ ನಡೆದ ಈ ಪೂಜೆ ದಿನ ಸಂಜೆ ದೀಪಾರಾಧನೆ ನಂತರ ದೇವಸ್ಥಾನದ ಎಲ್ಲ ಕೆಲಸ ಕಾರ್ಯ ಗಳಿಗೆ ಶ್ರಮಿಸಿದ ಪ್ರದಾನ ಅರ್ಚಕ ವಿಜಯ ಹಾಗೂ ಶಿವದಾಸ್ ಬೆಳಿಚಾಪಾಡ್ ಅವರನ್ನು ಸನ್ಮಾನಿಸ ಲಾಯಿತು, ಮಂಡಳಿಯ ಕಾರ್ಯ ದರ್ಶಿ ಸಂತೋಷ್, ಖಜಾಂಚಿ ಸುರೇಂದ್ರ, ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.