ಗುಡ್ಡೆಹೊಸೂರು, ಫೆ. 8: ನರೇಂದ್ರ ಮೋದಿ ಅವರ 5 ವರ್ಷದ ಅಭಿವೃದ್ಧಿ ಪರಿಚಯ ಪ್ರಧಾನ ಸೇವಕ ರಥಯಾತ್ರೆಗೆ ಗುಡ್ಡೆಹೊಸೂರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಸ್ವಾಗತಿಸಿದರು. ಈ ಸಂದರ್ಭ ಎಂ.ಆರ್. ಉತ್ತಪ್ಪ, ಗ್ರಾಮ ಪಂ. ಸದಸ್ಯರಾದ ಪ್ರವಿಣ್, ಡಾಟಿ, ಪುಷ್ಟ, ಕವಿತಾ, ಶಶಿ ಹಾಗೂ ಗುಡ್ಡೆಹೊಸೂರು ಬಿ.ಜೆ.ಪಿ. ಬೂತ್ ಕಮಿಟಿ ಅಧ್ಯಕ್ಷ ಕೆ.ಡಿ. ಗಿರೀಶ್, ಬಿ.ಸಿ. ಪ್ರದಿ ಮುಂತಾದವರು ಹಾಜರಿದ್ದರು.