ಶ್ರೀಮಂಗಲ: ಹುದಿಕೇರಿಯ ಲಿಟಲ್ ಫ್ಲವರ್ ಶಾಲೆಯಲ್ಲಿ ಗಣರಾಜ್ಯೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ನಡೆಯಿತು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಆಶಾಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಡಗು ವಾರ್ತೆ ಪತ್ರಿಕಾ ಸಂಪಾದಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ವಿದಾರ್ಥಿಗಳು ಯಾವದೇ ದುಶÀ್ಚಟಗಳಿಗೆ ಬಲಿಯಾಗದೆಂತೆ ಹೇಳಿದರು.

ಮತ್ತೋರ್ವ ಅತಿಥಿ ಸರ್ವೆ ಇಲಾಖೆಯ ಅಧಿಕಾರಿ ಬಾನಂಗಡ ಅರುಣ ಕೀಳರಿಮೆ ಇಟ್ಟುಕೊಳ್ಳದೆ ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಮಾತನಾಡಿ, ಶಿಕ್ಷಣ ಶಕ್ತಿ ಆಗಿದೆ ಶಿಕ್ಷಣದ ಅವಧಿ ಪೂರೈಸುವವರೆಗೆ ಯಾವದೇ ಆಕಷರ್Àಣೆಗೆ- ದುಶ್ಚಟಗಳಿಗೆ ಬಲಿಯಾಗದೆ ಏಕಾಗ್ರತೆಯಿಂದ ಶಿಕ್ಷಣದತ್ತ ಗುರಿಯನ್ನು ಕೇಂದ್ರೀಕರಿಸಬೇಕು ತಮ್ಮಲ್ಲಿ ಉತ್ತಮ ಶಿಕ್ಷಣವಿದ್ದರೆ ನಂತರದಲ್ಲಿ ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.

ವೇದಿಕೆಯಲ್ಲಿ ಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ ವಸಂತ್ ಹಾಜರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಮಿಲನ ಪ್ರಾರ್ಥಿಸಿ, ಶಿಕ್ಷಕರಾದ ದಮಯಂತಿ ಸ್ವಾಗತಿಸಿ, ಸ್ನೇಹ ವಂದಿಸಿದರು.

ಗುಡ್ಡೆಹೊಸೂರು: ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಮತ್ತು ಶಾಲಾ ವಾರ್ಷಿಕೊತ್ಸವವನ್ನು ಆಚರಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ಧ್ವಜಾರೋಹಣ ನೆರವೇರಿಸಿದರು.

ಶಾಲಾ ಮಕ್ಕಳಿಂದ ಸಾಮೂಹಿಕ ಕವಾಯತು ನಡೆಯಿತು. ಕ್ರೀಡಾಕೂಟವನ್ನು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ತಾ.ಪಂ. ಸದಸ್ಯೆ ಪುಷ್ಪ ಜನಾರ್ಧನ್, ಮಡಿಕೇರಿಯ ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಡಾಟಿ, ಬಿ.ಟಿ. ಪ್ರಸನ್ನ, ಎಂ.ಬಿ. ನಾರಯಣ, ಪುಷ್ಪ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಬಿ.ಪಿ. ಗುರುಬಸಪ್ಪ, ಕೆ.ಎನ್. ಚಂದ್ರಶೇಖರ್, ಬಿ.ಎನ್. ಕಾಶಿ, ಬಿ.ಎಸ್. ಧನಪಾಲ್, ರಾಮಕೃಷ್ಣ, ಸಿ.ಆರ್.ಪಿ. ಸತ್ಯನಾರಯಣ, ಗ್ರಾ.ಪಂ. ನೌಕರ ವಿಜಯ್, ಶಿಕ್ಷಕ ವೆಂಕಟೇಶ್, ಶಾಲಾ ಶಿಕ್ಷಕ ವೃಂದ ಹಾಜರಿದ್ದರು. ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿ, ಸಹ ಶಿಕ್ಷಕಿ ಯಶುಮತಿ ನಿರೂಪಿಸಿದರು. ಶಾಲಾ ವಾರ್ಷಿಕ ವರದಿಯನ್ನು ಶಿಕ್ಷಕಿ ಕವಿತಾ ವಾಚಿಸಿದರು. ಶಾಲಾ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಿತು.

ಪೊನ್ನಂಪೇಟೆ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೊನ್ನಂಪೇಟೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿ.ಡಿ. ಭಾಗ್ಯ ನೆರವೇರಿಸಿದರು. ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.

ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಕಾಕಮಾಡ ಚಂಗಪ್ಪ, ಕಟೀಮಾಡ ಜಿಮ್ಮಿ ಅಣ್ಣಯ್ಯ, ಕೊಳೇರ ದಯ ಚಂಗಪ್ಪ, ಪಿ.ಡಿ.ಓ. ಪುಟ್ಟರಾಜು, ಬಿ. ಮಂಜುನಾಥ್, ಬೈಲುಕುಪ್ಪೆ ತಾ.ಪಂ. ಸದಸ್ಯೆ ಮುಕೋಳೇರ ಆಶಾ ಪೂಣಚ್ಚ, ಸಿ.ಆರ್.ಪಿ.ಗಳಾದ ಟಿ.ಬಿ. ಜೀವನ್ ಹಾಜರಿದ್ದರು. ಎಂ.ಎನ್. ಝಾನ್ಸಿ ವರದಿ ವಾಚಿಸಿದರು. ಐ.ಎಂ. ರೋಜಿ ನಿರೂಪಿಸಿದರೆ, ವಿದ್ಯಾರ್ಥಿಗಳಿಂದ ಸಾಮೂಹಿಕ ಅಂಗಸಾಧನೆ, ಬ್ಯಾಂಡ್ ನೃತ್ಯ ಎಸ್. ಮಹೇಶ್ ನೇತೃತ್ವದಲ್ಲಿ ನಡೆಯಿತು.

ಶಾಲಾ ದತ್ತಿ ನಿಧಿಯ ಬಡ್ಡಿ ಮೊತ್ತವನ್ನು ಎಲ್.ಕೆ.ಜಿ.ಯಿಂದ 7ನೇ ತರಗತಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ನೀಡಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿ ವಿ.ಜೆ. ಫಿಲೋಮಿನ ನಿರ್ವಹಿಸಿದರು.ಕಡಂಗ: 2018-19ನೇ ಸಾಲಿನಲ್ಲಿ ಪುಟಾಣಿ ವಿಜ್ಞಾನ ಬಳಗದವರು ಸಂಘಟಿಸಿದ ಅಂತರರಾಷ್ಟ್ರೀಯ ಗಣಿತ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ವಿಜಯ ಶಾಲೆಯ 3 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇವರುಗಳಲ್ಲಿ 6 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದರು. 7ನೇ ತರಗತಿಯ ವಿದ್ಯಾರ್ಥಿನಿ ಐ.ಪಿ. ಬಿಂಧ್ಯಾ ರಾಷ್ಟ್ರಮಟ್ಟದಲ್ಲಿ 3ನೇ ರ್ಯಾಂಕ್ ಪಡೆದಿರುತ್ತಾಳೆ. 3ನೇ ತರಗತಿಯ ವಿದ್ಯಾರ್ಥಿನಿ ಎಂ.ಆರ್. ರಿಜ್ವಾನ ರಾಜ್ಯಮಟ್ಟದಲ್ಲಿ 2ನೇ ರ್ಯಾಂಕ್ ಗಳಿಸಿರುತ್ತಾಳೆ. 4ನೇ ತರಗತಿಯ ವಿದ್ಯಾರ್ಥಿ ಕೆ.ಎ. ರಮೀಜ್ ಹಾಗೂ 5ನೇ ತರಗತಿ ವಿದ್ಯಾರ್ಥಿನಿ ಎಂ.ಜಿ. ಮಾನ್ಯ ಜಿಲ್ಲಾಮಟ್ಟದಲ್ಲಿ 3ನೇ ರ್ಯಾಂಕ್ ಪಡೆದಿರುತ್ತಾಳೆ. 6ನೇ ತರಗತಿಯ ವಿದ್ಯಾರ್ಥಿನಿ ಎಂ.ಎಸ್. ಅನನ್ಯ ಹಾಗೂ 10ನೇ ತರಗತಿಯ ವಿದ್ಯಾರ್ಥಿನಿ ಎಸ್. ಕೃತಿ ತಾಲೂಕು ಮಟ್ಟದಲ್ಲಿ 3ನೇ ರ್ಯಾಂಕ್ ಪಡೆದಿದ್ದಾಳೆ. ಶಾಲೆಯ ಪರೀಕ್ಷಾ ಮಾರ್ಗದರ್ಶಿ ಶಿಕ್ಷಕಿ ಕೆ.ಎಸ್. ಸಫ್ರಿಯ ಅವರಿಗೆ ಪುಟಾಣಿ ವಿಜ್ಞಾನ ಬಳಗ ರಾಷ್ಟ್ರಮಟ್ಟದ ಸಂಘಟಕರು ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಎಲ್ಲಾ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವ ಧ್ವಜಾರೋಹಣ ನಂತರ ಸಭಾ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಬಲ್ಯಂಡ ಬಿದ್ದಪ್ಪ, ಕಾರ್ಯದರ್ಶಿ ಕಾಂಗೀರ ರವಿ ಮಾಚಯ್ಯ, ವ್ಯವಸ್ಥಾಪಕ ಬೊಳಕಾರಂಡ ಅಯ್ಯಣ್ಣ, ಮುಖ್ಯೋಪಾಧ್ಯಾಯ ಸೋಮಶೇಖರ್ ಹಾಗೂ ಗೀತಾ ಬೋಜಮ್ಮ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೀಡಲಾಯಿತು.

ಗಣಗೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಗಂದೂರಿನಲ್ಲಿ ಗಣರಾಜ್ಯೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರು, ಪೋಷಕರು, ಅತಿಥಿಗಳು, ಎಸ್.ಡಿ.ಎಂ.ಸಿ. ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮತ್ತು ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಂ. ಮುಸ್ತಫಾ ವಹಿಸಿದ್ದರು. ಮುಖ್ಯ ಶಿಕ್ಷಕಿ ಹೆಚ್.ಕೆ. ಪಾರ್ವತಿ ಸ್ವಾಗತಿಸಿದರು. ಶಾಲಾ ರಂಗ ಮಂದಿರ, ಶೌಚಾಲಯ, ತರಗತಿ ಕೊಠಡಿ, ವೆರಾಂಡದ ನೆಲಹಾಸು ಇತ್ಯಾದಿಗಳನ್ನು ಉತ್ತಮವಾಗಿ ದುರಸ್ತಿ ಮಾಡಿಕೊಟ್ಟ ಯುನೈಟೆಡ್ ವೇ ಆಫ್ ಬೆಂಗಳೂರು ಹಾಗೂ ಪ್ರಗತಿ ಸಂಸ್ಥೆ ಮೈಸೂರಿನ ಶರಣಪ್ಪ ಅವರನ್ನು ಸನ್ಮಾನಿಸಲಾಯಿತು. 2017-18ನೇ ಸಾಲಿನಲ್ಲಿ ಹೆಚ್ಚು ಅಂಕ ಮತ್ತು ಹಾಜರಾತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೋಲಾಟ ಹಾಗೂ ಕವ್ವಾಲಿಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮತ್ತು ಇನ್‍ಸ್ಪೈರ್ ಅವಾರ್ಡ್‍ನಲ್ಲಿ ರಾಜ್ಯಮಟ್ಟಕ್ಕೆ ಹೋದ ವಿದ್ಯಾರ್ಥಿನಿ ಸುನೈನಳನ್ನು ಎಸ್.ಡಿ.ಎಂ.ಸಿ. ಸದಸ್ಯ ರಜಾಕ್ ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಹಾಗೂ ಹಿಂದಿನ ಸಾಲಿನ ವಿದ್ಯಾರ್ಥಿಗಳಿಗೆ ದತ್ತಿನಿಧಿ, ಅಂಕ ಹಾಗೂ ಹಾಜರಾತಿಯ ಬಹುಮಾನ ನೀಡಲಾಯಿತು. ಸಹಶಿಕ್ಷಕಿ ಎಂ.ಜಿ ನಳಿನಿ ವರದಿ ವಾಚಿಸಿ, ನಿರೂಪಿಸಿದರು, ಸಹಶಿಕ್ಷಕಿ ಬಿ.ಬಿ. ಜಾನಕಿ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.