ಕುಶಾಲನಗರ, ಫೆ. 8: ಕುಶಾಲನಗರ ಸಮೀಪದ ಮಾದಾಪಟ್ಟಣ ನಿಸರ್ಗ ಟೂರಿಸ್ಟ್ ಸೆಂಟರ್ ಮಳಿಗೆಯಲ್ಲಿ ಪ್ರವಾಸಿಗರು ವ್ಯಾಪಾರಕ್ಕೆ ಬಂದ ಸಂದರ್ಭ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ವ್ಯಾಪಾರಿಗಳಾದ ಮೈಸಿ, ಮಧು, ಶರೀಫ್ ಮತ್ತು ಮೂವರು ಇತರರ ಮೇಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕುಶಾಲನಗರ ಪಟ್ಟಣ ಠಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಪ್ರವಾಸಿಗರಿಗೆ ತನ್ನ ಅಂಗಡಿಯಲ್ಲಿ ಸ್ಪೈಸಸ್ ಮತ್ತಿತರ ಸಾಮಗ್ರಿ ಖರೀದಿಸಲು ಹೇಳಿದ ಸಂದರ್ಭ ಅಂಗಡಿಯೊಂದರ ಸಹಾಯಕ ಹರ್ಷದ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ನಡುವೆ ಆರೋಪಿಗಳು ಗುಂಪು ಸೇರಿ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರ ಮನೆಗೆ ತಡರಾತ್ರಿಯಲ್ಲಿ ನುಗ್ಗಿ ಗೊಂದಲ ಸೃಷ್ಟಿಸಿದ ಹಿನೆÀ್ನಲೆಯಲ್ಲಿ ಪೊಲೀಸರು ಮಧ್ಯಪ್ರದೇಶಿಸಿ ಕ್ರಮಕೈಗೊಂಡ ಘಟನೆಯೂ ನಡೆದಿದೆ.
ಕುಶಾಲನಗರದಲ್ಲಿ ಕಳೆದೆರಡು ದಿನಗಳಿಂದ ನಡೆದ ಹಲ್ಲೆ ಪ್ರಕರಣದ ಬಗ್ಗೆ ಕಠಿಣ ಕಾನೂನು ಕ್ರಮಕೈಗೊಳ್ಳು ವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ತಿಳಿಸಿದ್ದಾರೆ.