*ಗೋಣಿಕೊಪ್ಪಲು, ಫೆ. 8: ಸುಮಾರು ಒಂದು ಕೋಟಿ ವೆಚ್ಚದಲಿ ಶಾಸಕರ ಅನುದಾನ, ಮಳೆಹಾನಿ ಪರಿಹಾರ, ಲೋಕೋಪಯೋಗಿ ಇಲಾಖೆ ನಿಧಿಯಿಂದ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಜಿ.ಪಂ. ಅಧ್ಯಕ್ಷ ಹರೀಶ್ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಗೊಳ್ಳಲು ಶಾಸಕರ ಶ್ರಮ ಬಹಳ ಮುಖ್ಯವಾಗಿದೆ. ಬಿಜೆಪಿ ಶಾಸಕರನ್ನು ಕಂಡ ನಂತರವೆ ಜಿಲ್ಲೆಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಹಂತಹಂತವಾಗಿ ಸರ್ಕಾರದ ಅನುದಾನವನ್ನು ಬಳಸಿ ಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಮುಂದಾಗಿದ್ದಾರೆ. ಇವರೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ. ರಸ್ತೆ ವಸತಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಜನರೆಡೆಗೆ ತಲಪಿಸುವ ಕಾರ್ಯ ನಡೆದಿದೆ. ಈ ನಿಟ್ಟಿನಲ್ಲಿ ಒಂದು ಕೋಟಿ ವೆಚ್ಚದಲ್ಲಿ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಹಲವು ಗ್ರಾಮದ ರಸ್ತೆಗಳು ಅಭಿವೃದ್ಧಿಗೊಳ್ಳಲಿದೆ ಎಂದರು. ರಸ್ತೆ ಡಾಂಬರೀಕರಣದ ಸಂದರ್ಭ ಗ್ರಾಮಸ್ಥರು ಖುದ್ದು ಹಾಜರಿದ್ದು; ಗುಣಮಟ್ಟ ಕಾಮಗಾರಿ ನಡೆಯುವಂತೆ ಪರಿಶೀಲಿಸಬೇಕು. ಗುತ್ತಿಗೆದಾರರಲ್ಲಿ ಕಾಮಗಾರಿಯ ಬಗ್ಗೆ ಯಾವದೇ ರಾಜೀಇಲ್ಲ. ಪಾರದರ್ಶಕತೆ ಯಿಂದ ಕಾಮಗಾರಿ ನಡೆಯಬೇಕು ಎಂದು ಅಭಿಯಂತರರುಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಞಂಗಡ ಅರುಣ್ ಬೀಮಯ್ಯ ಅವರು ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ ಕಾಮಗಾರಿಗಳ ಬಗೆ ಮಾಹಿತಿ ನೀಡಿದರು.
ವಗರೆ ಅಯ್ಯಪ್ಪ ದೇವಸ್ಥಾನ ರಸ್ತೆಗೆ ಮಳೆಹಾನಿ ವಿಶೇಷ ಅನುದಾನದಲ್ಲಿ 15 ಲಕ್ಷ ಮತ್ತು ಲೊಕೋಪಯೋಗಿ ಇಲಾಖೆ ನಿಧಿಯಿಂದ ಹತ್ತು ಲಕ್ಷ ಸೇರಿ ಒಟ್ಟು 25 ಲಕ್ಷದಲ್ಲಿ ರಸ್ತೆ ಡಾಂಬರೀಕರಣ ನಡೆಯಲಿದೆ ಎಂದು ಹೇಳಿದರು.
ನೆಮ್ಮಲೆ, ಬೇಕರಿ ಮತ್ತೋಡ್- ತೆರಾಲು ಸಂಪರ್ಕ ರಸ್ತೆ ಲೋಕೋಪಯೋಗಿ ಇಲಾಖೆಯಿಂದ 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಕರ್ಣಂಡ ಸಂಪರ್ಕ ರಸ್ತೆ 5 ಲಕ್ಷ ವೆಚ್ಚದಲ್ಲಿ ಮತ್ತು ಮಾಣೀರ ಐನ್ ಮನೆ ಕುಟುಂಬಸ್ಥರ ರಸ್ತೆ 5 ಲಕ್ಷ ಅನುದಾನ ದಲ್ಲಿ, ಹತ್ತು ಲಕ್ಷ ವೆಚ್ಚದಲ್ಲಿ ದುರ್ಗಿ ದೇವಸ್ಥ್ತಾನ ರಸ್ತೆ ಅಭಿವೃದ್ಧಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯ 5 ಲಕ್ಷ ವೆಚ್ಚದಲ್ಲಿ ತಾವಳಗೇರೆ ಕೋಲುಮಂದ್, ಕಲ್ಲುಮೊಟ್ಟೆ ಪೈಸೇರಿಗೆ ಹಾಗೂ ನೂರೇರ, ಕೈಬುಲಿರಾ, ತಡಿಯಂಡ ಮಚ್ಚಮಾಡ ರಸ್ತೆ ಕಾಮಗಾರಿ ನಡೆಯಲಿರುವದಾಗಿ ತಿಳಿಸಿದರು.
ಹರಿಹರ ಗ್ರಾಮದ ಕುಂದೂರು ತಾವಳಗೆರೆ ಭದ್ರಕಾಳಿ ದೇವಸ್ಥಾನ ರಸ್ತೆಗೆ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಹತ್ತು ಲಕ್ಷ ಕಣಿವೆಗುಂಡು ಮತ್ತು 5 ಲಕ್ಷ ಕುಂದೂರು ರಸ್ತೆ ಡಾಂಬರೀಕರಣಗೊಳ್ಳಲಿದ್ದು, ಹರಿಹರ ಸುಬ್ರಹ್ಮಣ್ಯ ದೇವಸ್ಥಾನ, ಮಂಡೆಮುಡಿಕೇರಿಗೆ ಹೋಗುವ ದಾರಿಗೆ ಲೋಕೋಪಯೋಗಿ ಮತ್ತು ಶಾಸಕರ ಅನುದಾನದಲ್ಲಿ 16 ಲಕ್ಷದಲ್ಲಿ ರಸ್ತೆ ಡಾಂಬರೀಕರಣ ನಡೆಯಲಿದೆ. ಲೋಕೋಪಯೋಗಿ ಇಲಾಖೆ ನಿಧಿಯಿಂದ ಹರಿಹರ ಬಲ್ಯಮಂಡೂರು ಮುಖ್ಯ ರಸ್ತೆಯಿಂದ ಸಿದ್ದಿಕೊಪ್ಪಲು ಸಂಪರ್ಕ ರಸ್ತೆ 5 ಲಕ್ಷದಲ್ಲಿ ಅಭಿವೃದ್ಧಿ ಗೊಳ್ಳಲಿದೆ. ಕಾಯಂಕೊಲ್ಲಿ, ಲಕ್ಷ್ಮಣ ತೀರ್ಥ-ನಾಲ್ಕೇರಿ ಸಂಪರ್ಕ ರಸ್ತೆ 5 ಲಕ್ಷ ವೆಚ್ಚದಲ್ಲಿ ಮತ್ತು ಈಸ್ಟ್ನೆಮ್ಮಲೆ ಶ್ರೀಮಂಗÀಲ ಮುಖ್ಯ ರಸ್ತೆಯಿಂದ ವೆಸ್ಟ್ನೆಮ್ಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ 5 ಲಕ್ಷ ಕಾಮಗಾರಿ ನಡೆಯಲಿರುವದಾಗಿ ಮಾಹಿತಿ ಹಂಚಿಕೊಂಡರು.
ಈ ಸಂದರ್ಭ ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್ಕುಮಾರ್, ಟೀ ಶೆಟ್ಟಿಗೇರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಗ್ರಾ.ಪಂ ಸದಸ್ಯ ರಂಜಿ, ಶೈಲಾ, ಆರ್.ಎಂ.ಸಿ. ಸದಸ್ಯೆ ಸುಶೀಲ, ಚಟ್ಟಂಗಡ ರಾಜ, ಮಾಣೀರ ಉಮೇಶ್, ಚಟ್ಟಂಡ ನಾಣಿ ಕಟ್ಟೇರ ಲಾಲಪ್ಪ, ಉದಯ, ಮಿತನ್, ಮಿಲನ್, ಕರ್ಣಂಡ ಚಲನ್, ಕೃಷ್ಣ ತಿತೀರಾ ಸೋಮಣ್ಣ, ಬಾದುಮಂಡ ಚಿಮ್ಮ, ಕಾರ್ಯಪ್ಪ, ಚಿಣ್ಣಪ್ಪ, ನಂಜಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.