ಮಡಿಕೇರಿ, ಫೆ. 8: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಫೆ.13 ರಂದು ಗಾಳಿಬೀಡುವಿನಲ್ಲಿ ‘ಅರೆಭಾಷೆ ಸಾಂಸ್ಕøತಿಕ ಕೆಡ್ಡಾಸ ಹಬ್ಬ’ ಹಾಗೂ ತಾ.17 ರಂದು ಸುಳ್ಯದ ದುಗ್ಗಲಡ್ಕದಲ್ಲಿ ‘ಜನಪದ ಆಟ ಕೂಟ’ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಂ ಅವರು, ಫೆ.13 ರಂದು ಗಾಳಿಬೀಡು ಅಡ್ಕದ ಬಾಣೆಯ ಶ್ರೀ ಮಾದೂರಪ್ಪ ಸಾಂಸ್ಕøತಿಕ ವೇದಿಕೆ, ಸ್ನೇಹಿತರ ಯುವಕ ಸಂಘ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ನಡೆಯಲಿರುವ ಅರೆಭಾಷೆ ಸಂಸ್ಕøತಿಲಿ ಕೆಡ್ಡಾಸ ಹಬ್ಬ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಮಹಿಳೆಯರ ರಂಗೋಲಿ ಸ್ಪರ್ಧೆಯೊಂದಿಗೆ ಆರಂಭವಾಗಲಿದೆ ಎಂದರು.

ಗ್ರಾಮೀಣ ಜನಪದ ಕ್ರೀಡಾ ಸ್ಪರ್ಧೆಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಕೈಕಟ್ಟಿ ಬಿಸ್ಕೆಟ್ ಕಚ್ಚಿ ತಿನ್ನುವ ಸ್ಪರ್ಧೆ, 10ನೇ ತರಗತಿ ಒಳಗಿನ ಮಕ್ಕಳಿಗೆ ಕುಳಿತಲ್ಲೆ ಗಾದೆಮಾತು ಬರೆದು ವೇದಿಕೆಯಲ್ಲಿ ಹೇಳುವ ಸ್ಪರ್ಧೆ, ಮಹಿಳೆಯರಿಗೆ ನೀರು ಚೆಂಬಿನ ಓಟ, ಕೋಳಿ ಜಗಳ, ಬಕೆಟ್‍ಗೆ ಚೆಂಡು ಹಾಕುವದು (50 ವರ್ಷ ಮೇಲ್ಪಟ್ಟವರಿಗೆ) ಪುರುಷರಿಗೆ ರಬ್ಬರ್ ಬಿಲ್ಲಿನಿಂದ ಕಲ್ಲು ಹೊಡೆದು ಒಡೆಯುವದು, ಗೋಣಿ ಚೀಲದ ಓಟ, ಕೋಳಿ ಜಗಳ, ಕಾಲು ಕಟ್ಟಿ ಓಡುವದು, ಬಕೆಟ್‍ಗೆ ಚೆಂಡು ಹಾಕುವದು (50 ವರ್ಷ ಮೇಲ್ಪಟ್ಟವರಿಗೆ), ದಂಪತಿಗಳಿಗೆ ಅಡಿಕೆ ಹಾಳೆ ಎಳೆಯುವದು, ಸಾರ್ವಜನಿಕರಿಗೆ ಪಟ್ಟಣಕ್ಕೆ ಬಾಂಬ್, ಅರೆಭಾಷೆ ಹಾಡು, ರಸ ಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿ ಕೊಳ್ಳುವದರೊಂದಿಗೆ ರಂಗೋಲಿ ಪುಡಿಯನ್ನು ಸ್ಪರ್ಧಿಗಳೇ ತರಬೇಕು, ನೀರು ಚೆಂಬಿನ ಸ್ಪರ್ಧಿಗಳು ಚೆಂಬು ತರಬೇಕೆಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಪೂರ್ವಾಹ್ನ 9.30 ಗಂಟೆಗೆ ನಿವೃತ್ತ ಡಿವೈಎಸ್‍ಪಿ ಯಾಲದಾಳು ಡಿ. ಕೇಶವಾನಂದ ಅವರು ಉದ್ಘಾಟಿಸಲಿದ್ದು, ಗಾಳಿಬೀಡು ಗ್ರಾಪಂ ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ, ಗ್ರಾಪಂ ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ, ಸದಸ್ಯ ಎಂ.ಡಿ. ಸುಭಾಷ್ ಚಂದ್ರ ಆಳ್ವ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಕೋಳುಮುಡಿಯನ ಆರ್. ಅನಂತ ಕುಮಾರ್, ಗಾಳಿಬೀಡು ದವಸ ಭಂಡಾರದ ಅಧ್ಯಕ್ಷ ಕೊಂಬಾರನ ಪಿ.ಲಿಂಗರಾಜು, ಗಾಳಿಬೀಡು ಮಹಿಳಾ ಸಮಾಜದ ಅಧ್ಯಕ್ಷೆ ಅಚ್ಚಪಟ್ಟೀರ ಜಿ. ಕವಿತ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅಪರಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಳ್ಯ ನೆಹರು ಸ್ಮಾರಕ ಪದವಿ ಕಾಲೇಜು ಉಪನ್ಯಾಸಕ ಸಂಜೀವ ಕುದ್ಪಾಜೆ ಅವರು ಕೆಡ್ಡಾಸ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಲಿದ್ದು, ವೀರಾಜಪೇಟೆ ಶಾಸಕ ಕೊಂಬಾರನ ಜಿ. ಬೋಪಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯೆ ಯಾಲದಾಳು ಪದ್ಮಾವತಿ, ತಾಪಂ ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ವಕೀಲರಾದ ಡಾ.ಯಾಲದಾಳು ಮನೋಜ್ ಬೋಪಯ್ಯ, ಅಕಾಡೆಮಿಯ ಮಾಜಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ, ಕೊಡಗು ಗೌಡ ಸಮಾಜದ ನಿರ್ದೇಶಕಿ ಉಳುವಾರನ ಅಮೃತ ಸುರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭದ ಬಳಿಕ ಸ್ಥಳೀಯ ಕಲಾವಿದರಿಂದ ಅರೆಭಾಷೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಜಯರಾಮ್ ವಿವರಿಸಿದರು.

17 ರಂದು ಜನಪದ ಆಟಕೂಟ

ಸುಳ್ಯದ ದುಗ್ಗಲಡ್ಕ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜನಪದ ಆಟಕೂಟ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಲಗೋರಿ, ಗೋಣಿ ಚೀಲ ಓಟ, ಪುರುಷರಿಗೆ ಕುಟ್ಟಿ ದೊಣ್ಣೆ, ಬೆರ್ಚೆಂಡು, ಅಂಬುಗಾಯಿ, ಕಾಯಿ ಕುಟ್ಟುವದು, ಕಾಯಿಗೆ ಕಲ್ಲು ಹೊಡೆಯುವದು, ಮಹಿಳೆಯರಿಗೆ ನೋಂಡಿ ಆಟ, ಜಿಬಿಲಿ, ಕಲ್ಲಾಟ, ಒಂಟಿ ಕಾಲಿನ ಓಟ, ಸಂಗೀತ ಕುರ್ಚಿ, ಶಾಲೆ ಮಕ್ಕಳಿಗೆ ಸೈಕಲ್ ಚಕ್ರ ಹೊಡೆಯುವದು, ಹಾಳೆಯಲ್ಲಿ ಎಳೆಯುವದು ಮುಂತಾದ ಆಟಗಳು ನಡೆಯಲಿವೆ ಎಂದರು.

ಕಾರ್ಯಕ್ರಮವನ್ನು ಅಂದು ಪೂರ್ವಾಹ್ನ ಸುಳ್ಯ ನಗರ ಪಂಚಾಯ್ತಿ ಅಧ್ಯಕ್ಷೆ ಶೀಲಾವತಿ ಮಾಧವ ಉದ್ಘಾಟಿಸಲಿದ್ದಾರೆ. ಅಹರಾಹ್ನ 2.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ರೀಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 17 ಮಂದಿ ಸಾಧಕರನ್ನು ಸನ್ಮಾನಿಸಲಾಗುವದೆಂದು ತಿಳಿಸಿದರು.

ಸಮಾರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಗೌಡ ಮಾಣಿಬೆಟ್ಟು, ಹಿರಿಯ ಕ್ರೀಡಾಪಟು ಹಾಗೂ ನಿವೃತ್ತ ಆರ್‍ಎಫ್‍ಒ ಬಿ.ಎಂ.ಮಾಧವ ಗೌಡ, ಮಾಜಿ ಓಟಗಾರರಾದ ಜಗದೀಶ ಹಸಿಯಡ್ಕ, ಬಂಗಾರಕೋಡಿ ಬೋಜಪ್ಪ ಗೌಡ, ಲಗೋರಿ ಜನಕ ದೊಡ್ಡಣ್ಣ ಬರೆಮೇಲು, ಮಾಜಿ ಯೋಧರಾದ ಎ.ಯು. ಸುಬ್ರಮಣ್ಯ, ಮದಕ ಚಂದ್ರಶೇಖರ ಗೌಡ, ಕೃಷಿಕ ಹಾಗೂ ಸಮಾಜ ಸೇವಕ ಮಾಣಿಬೆಟ್ಟು ಎಂ.ಕೆ. ಪುರುಷೋತ್ತಮ ಗೌಡ, ಹಿರಿಯ ಓಟಗಾರರಾದ ಮಾದನಮನೆ ಎಂ. ರಾಮಯ್ಯ, ಕುಸುಮ ಮುತ್ಲಾಜೆ, ಸನ್ನದು ಲೆಕ್ಕಪರಿಶೋಧಕ ನಡುಬೆಟ್ಟು ಶಿವಕುಮಾರ್, ಯುವ ಉದ್ಯಮಿ, ಕೆ.ವಿ. ಸುರೇಶ್ ಚಂದ್ರ, ಹಿರಿಯ ಯಕ್ಷಗಾನ ಕಲಾವಿದ ಮತ್ತು ನಾಟಕಕಾರ ರಾಮಚಂದ್ರ ನಾಯಕ ನೀರಬಿದಿರೆ, ಸಮಾಜ ಸೇವಕ ಜನಾರ್ಧನ ಗೌಡ ಮೋಂಟಡ್ಕ, ಕ್ರೀಡಾಪಟು ಮಾಧವ ಗೌಡ ದುಗ್ಗಲಡ್ಕ, ಹೈನುಗಾರಿಕೆ ಕ್ಷೇತ್ರದಲ್ಲಿ ಕೆ.ಬಿ.ಪುರುಷೋತ್ತಮ ಗೌಡ ಹಾಗೂ ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷೆ ವಾರಿಜ ಕೊರಗಪ್ಪ ಅವರುಗಳನ್ನು ಸನ್ಮಾನಿಸಲಾಗುವದು.

ಸಂಜೆ 4.30 ರಿಂದ ಕೊಡಗಿನ ಕಲಾ ತಂಡಗಳಾದ ಕಾಲೂರಿನ ಕೊರಿಯನ ಹರೀಶ್ ಹಾಗೂ ಮಡಿಕೇರಿಯ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆ ತಂಡದಿಂದ ಸಾಂಸ್ಕøತಿಕ ಮತ್ತು ಜನಪದ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಅಕಾಡೆಮಿಯು ಮುಂದಿನ ದಿನಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಮಾರ್ಚ್ ತಿಂಗಳಿನಲ್ಲಿ ಪ್ರಥಮ ಬಾರಿಗೆ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಸುಳ್ಯದಲ್ಲಿ ನಡೆಸಲಿದೆ. ಅಲ್ಲದೆ, ಸುಬ್ರಹ್ಮಣ್ಯ, ಭಾಗಮಂಡಲ ಮುಂತಾದ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಜಯರಾಮ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ನಿರ್ದೇಶಕರುಗಳಾದ ಕುಂಬುಗೌಡನ ಪ್ರಸನ್ನ, ಕಡ್ಲೇರ ತುಳಸಿ ಮೋಹನ್, ಕೋಳುಮುಡಿಯನ ಅನಂತ ಕುಮಾರ್ ಹಾಗೂ ಕೆ.ಟಿ.ವಿಶ್ವನಾಥ್ ಉಪಸ್ಥಿತರಿದ್ದರು.