ಚೆಟ್ಟಳ್ಳಿ, ಫೆ. 8: ಸಮೀಪದ ಸುಂಟಿಕೊಪ್ಪದ “ಟೀಂ ಮುನವ್ವಿರಿಸ್” ಇವರ ವತಿಯಿಂದ ಸುಂಟಿಕೊಪ್ಪದ ಕೊಡವ ಸಮಾಜದಲ್ಲಿ ನಡೆದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯಲ್ಲಿ ಕಂಡಕೆರೆಯ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ದ್ವಿತೀಯ ಸ್ಥಾನವನ್ನು ವೀರಾಜಪೇಟೆ ಸಮೀಪದ ಗುಂಡಿಕೆರೆ ಮದರಸ ವಿದ್ಯಾರ್ಥಿಗಳು ಪಡೆದುಕೊಂಡರೆ, ಗದ್ದೆಹಳ್ಳ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು. ದಫ್ ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ 9 ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಮೊಹಿದ್ದೀನ್ ಮಾಸ್ಟರ್ ಹಾಗೂ ಹಂಸ ರಹ್ಮಾನಿ ಕಂಡಕೆರೆ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮ್ಮರ್ ಮಾಸ್ಟರ್ ಸುಂಟಿಕೊಪ್ಪ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಅಬ್ದುಲ್ ರಝಾಕ್, ಬಶೀರ್ ಹಾಜಿ, ಉಸ್ಮಾನ್, ಸುಂಟಿಕೊಪ್ಪ ಮುಸ್ಲಿಂ ಜಮಾಅತ್ ಖತೀಬರಾದ ರಫೀಕ್ ಸಹದಿ, ನೌಫಲ್ ಮಹ್ಳರಿ, ಹಂಸ ರಹ್ಮಾನಿ ಕಂಡಕರೆ, ಮೊಹಿದ್ದೀನ್ ಮಾಸ್ಟರ್ ಇದ್ದರು.