ಮಡಿಕೇರಿ, ಫೆ. 8: ಬೆಂಗಳೂರಿನ ಲಗ್ಗೆರೆಯಲ್ಲಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ‘ನಮ್ಮನೆ’ ಸಾಂಸ್ಕøತಿಕ ಕಲಾಕೇಂದ್ರದ ನೂತನ ಸಭಾಭವನ ಉದ್ಘಾಟನೆ ಹಾಗೂ ಸ್ನೇಹ ಮಿಲನ ಸಮಾರಂಭ ತಾ. 10ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸಭಾಭವನ ಉದ್ಘಾಟಿಸುವರು. ವಸತಿ ಬಡಾವಣೆಯ ನಾಮಫಲಕವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೆರವೇರಿಸುವರು. ಅತಿಥಿಗಳಾಗಿ ಶಾಸಕರಾದ ಕೆ.ಜಿ. ಬೋಪಯ್ಯ, ಆರ್. ಮಂಜುನಾಥ್, ಸಂಜೀವ ಮಠಂದೂರು, ಇನ್ನಿತರರು ಪಾಲ್ಗೊಳ್ಳುವರು. ಸಮಾಜದ ಅಧ್ಯಕ್ಷ ತೇನನ ರಾಜೇಶ್ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.