ಶನಿವಾರಸಂತೆ, ಫೆ. 8: ಕೊಡ್ಲಿಪೇಟೆ ಹೋಬಳಿಯ ಹಿಪ್ಪಗಳಲೆ ಗ್ರಾಮದ ನಿವಾಸಿ ಹೆಚ್.ಬಿ. ರಾಜಶೇಖರ್ (45) ನಡೆದುಕೊಂಡು ಹೋಗುತ್ತಿರು ವಾಗ, ಮುಂಭಾಗದಿಂದ ಬಂದ ಇಂಡಿಕಾ ಕಾರು (ಕೆಎ 13 ಬಿ 7966) ಡಿಕ್ಕಿಯಾದ ಪರಿಣಾಮ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಾಜಶೇಖರ್ ಅವರು ಬುಧವಾರ ತಮ್ಮ ಮಗಳ ಮನೆಯಾದ ಚಿಕ್ಕಾಕುಂದ ಗ್ರಾಮಕ್ಕೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಗಾಯಾಳುವನ್ನು ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆ ಅರಕಲಗೂಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ರಾಜಶೇಖರ್ ಮೃತಪಟ್ಟಿರುವದಾಗಿ ತಿಳಿಸಿದ್ದು, ಮೃತರ ಮಗ ಹೆಚ್.ಆರ್. ಧರ್ಮಪ್ಪ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ತನಿಖೆ ಮುಂದುವರಿಯುತ್ತಿದೆ.