ಗೋಣಿಕೊಪ್ಪ ವರದಿ, ಫೆ. 8: ಆಂಧ್ರ ಪ್ರದೇಶದ ಗುಂಟೂರುವಿನಲ್ಲಿ ನಡೆಯುತ್ತಿರುವ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಕೊಡಗು ತಂಡದ ಪದಕದ ಬೇಟೆ ಮುಂದುವರಿದಿದೆ. 3ನೇ ದಿನದ ಕ್ರೀಡಾಕೂಟದಲ್ಲಿ ಕೊಡಗಿನ ಆಟಗಾರರು 1 ಕಂಚಿನ ಪದÀಕ ಗೆದ್ದುಕೊಂಡಿದ್ದಾರೆ.
50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅಮೆಮನೆ ಜನಾರ್ಧನ್ ಅವರು 1,500 ಮೀ. ಓಟದಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಕಂಚು ಗೆದ್ದಿದ್ದಾರೆ. ಇದರಿಂದಾಗಿ ಇಲ್ಲಿವರೆಗೆ ಕೊಡಗು ತಂಡ 3 ಚಿನ್ನ, 1 ಕಂಚು ಗೆದ್ದಂತಾಗಿದೆ.