ಸಿದ್ದಾಪುರ, ಫೆ. 8: ಸಿದ್ದಾಪುರದ ಮೈಸೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಕಾಮಗಾರಿಯನ್ನು ತಾ.ಪಂ. ಸದಸ್ಯ ಕೆ.ಎಂ. ಜೆನೀಸ್ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸದ್ಯದಲ್ಲೆ ರುದ್ರಭೂಮಿಗೆ ತೆರಳುವ ರಸ್ತೆಯ ಬದಿಗೆ ದಾನಿಗಳ ಮುಖಾಂತರ ಕಬ್ಬಿಣದ ಬಾಗಿಲನ್ನು ಅಳವಡಿಸಲಾಗುವದು. ರುದ್ರಭೂಮಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವದು. ರಸ್ತೆಯಿಂದ ಶವಗಾರದವರೆಗೆ ವಾಹನ ತೆರಳಲು ಕಾಂಕ್ರಿಟ್ ರಸ್ತೆಯನ್ನು ನಿರ್ಮಾಣ ಮಾಡಲಾಗುವದು ಅಲ್ಲದೆ ರುದ್ರಭೂಮಿಯ ಸುತ್ತಲೂ ಸ್ವಚ್ಛತೆಗೆ ಮಹತ್ವ ನೀಡಲಾಗುವದು ಎಂದು ತಿಳಿಸಿದರು.